ಅಂಬೇಡ್ಕರ್‌ರಂತೆ ಓದಿ, ಶಿಕ್ಷಣವಂತರಾಗಿ

ಸಿರವಾರ,ಮಾ.೧೨- ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಓದಲು ಎಲ್ಲಾ ಅವಕಾಶಗಳು ಸಿಗುತ್ತಿವೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಅಂಬೇಡ್ಕರ್‌ರಂತೆ ಓದಿ, ಶಿಕ್ಷಣವಂತರಾಗಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಹಿರಿಯ ಸಾಹಿತಿ ನಿವೃತ್ತ ಶಿಕ್ಷಕ ಆಂಜಿನಯ್ಯ ಜಾಲಿಬೆಂಚಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಿನ ಕಲ್ಲೂರು ಗ್ರಾಮದ ಕೃಷ್ಣಾನಗರ ಕಾಲೋನಿಯ ಲಕ್ಷ್ಮೀ – ಬಸವರಾಜ ಭೋವಿ ಈರಲಗಡ್ಡಿ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಶನಿವಾರ ಆಯೋಜಿಸಿದ್ದ, ೫೫ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯಭಾಷಣಕಾರರಾಗಿ ಕಲ್ಲೂರು ಸ.ಪ್ರೌ.ಶಾಲೆ ದೈಹಿಕ ಶಿಕ್ಷಕ ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ತಂದೆ-ತಾಯಿ ಮತ್ತು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಬೇಕು ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಮಾನಗಳು ದೊರೆಯಲಿವೆ ಎಂದರು.
ಕಾರ್ಯಕ್ರಮದಲ್ಲಿ ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಮಹಾಪೋಷಕ ಎಂ.ಆರ್.ಭೇರಿ ಮಾತನಾಡಿದರು. ಕಲ್ಲೂರು ಉನ್ನತೀಕರಿಸಿದ ಸ.ಮಾ.ಹಿ.ಪ್ರಾ.ಶಾಲೆ ಶಿಕ್ಷಕ ಫಾಲಾಕ್ಷ ಭೋವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಕೆ. ಶಿವಪ್ಪ ನಾಯಕ ಕಲ್ಲೂರು ನಿರೂಪಿಸಿದರು.
ಈ ಸಂದರ್ಭದಲ್ಲಿ ಡಾ.ರಾಜಕುಮಾರ್ ಅಭಿಮಾನಿ ಹುಲಿಗೆಪ್ಪ ಜಗ್ಲಿ ಹೊಸೂರು, ಭೀಮರಾಯ ಕಲ್ಲೂರು, ಶಿಕ್ಷಕರಾದ ವಿಜಯ್ ಕುಮಾರ್ ಕಲ್ಲೂರು, ಜಯಸಿಂಹ ಕಲ್ಲೂರು, ಮಾರ್ಕಂಡಯ್ಯ ಕಲ್ಲೂರು, ಆರ್ಶಿವಾದಮ್ಮ ಕಲ್ಲೂರು, ದೇವರಾಜ ಕಲ್ಲೂರು, ಅಬ್ದುಲ್ ರೋಫ್, ಮಹಾದೇವ, ಶಂಕರ, ಗೋವಿಂದ, ಹನುಮೇಶ, ರವಿ ಸೇರಿದಂತೆ ಮಕ್ಕಳು, ವಿದ್ಯಾರ್ಥಿ ಗಳು, ಮಹಿಳೆಯರು ಭಾಗವಹಿಸಿದ್ದರು.