ಅಂಬೇಡ್ಕರವರನ್ನು ಅವಮಾನಿಸಿದ ಆರೋಪಿಯನ್ನು ಬಂಧಿಸುವಂತೆ ಆಗ್ರಹ

ವಿಜಯಪುರ, ಜು.19-ವಿಶ್ವರತ್ನ ಡಾ. ಬಾಬಾಸಾಹೇಬ ಅಂಬೇಡ್ಕರವರನ್ನು ಅವಮಾನಿಸಿ ಆಶ್ಲೀಲವಾಗಿ ಅವರ ಭಾವಚಿತ್ರವನ್ನು ತಿರುಚಿ ಮತ್ತು ಕೆಟ್ಟ ಹಾಡುಗಳನ್ನು ಎಡಿಟ್ ಮಾಡಿ ತನ್ನ ವಾಟ್ಸ್‍ಆಪ್ ಹಾಗೂ ಪೇಸ್‍ಬುಕನಲ್ಲಿ ಹರಿ ಬಿಟ್ಟಿರುವ ಯಾದಗಿರಿ ತಾಲೂಕಿನ ಬಂದಳ್ಳಿ ಗ್ರಾಮದ ಮಲ್ಲು ಬಂದಳ್ಳಿ ಇವನನ್ನು ಕೂಡಲೇ ಬಂಧಿಸಿ ಅವನನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ವಿಜಯಪುರ ಜಿಲ್ಲಾ ಶಾಖೆಯ ಸಂಚಾಲರಾದ ಚಂದ್ರಕಾಂತ ಸಿಂಗೆ ಅವರು ಆಗ್ರಹಪಡಿಸಿದ್ದಾರೆ.
ಮಹಾನ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ ಅವರನ್ನು ಇಂತಹ ಮಂದ ಬುದ್ದಿಯ ನಾಲಾಯಕರು ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರದ ಜೊತೆಗೆ ಮತ್ತು ಅವರ ವಿಚಾರಗಳ ಜೊತೆ ಚೆಲ್ಲಾಟವಾಡಿ ತಮ್ಮ ಹುಂಬತನವನ್ನು ಪ್ರದರ್ಶಿಸುವ ಅವಿವೇಕೆಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದರೆ ದೇಶದ ಯಾವುದೇ ಮಹಾನ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವದನ್ನು ಹಾಗೂ ಭಾವಚಿತ್ರ ತಿರುಚುವದಾಗಲಿ ಮತ್ತು ಅವರ ಅವಹೇಳನಕಾರಿಯಾಗಿ ಮಾತನಾಡುವದನ್ನು ನಿಲ್ಲಿಸುತ್ತಾರೆ. ಆದಕಾರಣ ಯಾದಗಿರಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ ವರಿಷ್ಟಾಧಿಕಾರಿಗಳು ಈ ಆರೋಪಿ ಮಲ್ಲು ಬಂದಳ್ಳಿಯನ್ನು ಪತ್ತೆ ಮಾಡಿ ಅವನನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಜಂಟಿಯಾಗಿ ಜಿಲ್ಲಾ ಸಂಘಟನಾ ಸಂಚಾಲಕರಾದ ಚನ್ನು ಕಟ್ಟಿಮನಿ ಹಾಗೂ ಬೆಳಗಾವಿ ವಿಭಾಗಿಯ ಸಂಘಟನಾ ಸಂಚಾಲಕರಾದ ದೇವೆಂದ್ರ ಹಾದಿಮನಿ ಮತ್ತು ಹಿರಿಯ ಹೋರಾಟಗಾರರಾದ ಅನಿಲ ಹೊಸಮನಿ ಅವರು ಆಗ್ರಹಿಸಿದ್ದಾರೆ.