ಅಂಬೇಡ್ಕರರ ಆದರ್ಶ ಗುಣಗಳು ಅಳವಡಿಸಿಕೊಳ್ಳಿ:ಶ್ರೀಗಳು

ಚಿತ್ತಾಪುರ:ಎ.22: ಪ್ರಜಾಪ್ರಭುತ್ವದ ಅಡಿಯಲ್ಲಿ ಜೀವನವನ್ನು ನಿರ್ವಹಿಸುತ್ತಿರುವ ನಮಗೆ­ಲ್ಲರಿಗೂ ಮಹನೀಯರ ತತ್ವಗಳು ಮತ್ತು ಅವರ ಆದರ್ಶ ಗುಣಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಂಬಳೇಶ್ವರ ಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಭೀಮಾನಗರ ಬಹಾರಪೇಠದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 130ನೇ ಜನ್ಮದಿನೋತ್ಸವದ ಅಂಗವಾಗಿ ಸವಿಧಾನ ರಕ್ಷಣೆಗಾಗಿ ಸರ್ವಜನ ಸಂಕಲ್ಪ ಕುರಿತು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದ ಸುಭದ್ರತೆ ಮತ್ತು ಸೌಹಾರ್ಧತೆಗಾಗಿ ಜೀವನದ ಉದ್ದಕ್ಕೂ ತಮ್ಮ ಜೀವನವನ್ನು ತ್ಯಾಗ ಮಾಡಿದ ಡಾ. ಬಿ.ಆರ್. ಅಂಬೆಡ್ಕರ್ ಅವರು ಸರ್ವರು ಸಮನಾಗಿ ಬಾಳಲಿ ಎಂಬ ಮಹತ್ವದ ಉದ್ದೇಶವನ್ನು ಹೊಂದಿ ಸಂವಿಧಾನವನ್ನು ರಚಿಸಿದರು. ಇಂಥ ಮಹಾನ್ ವ್ಯಕ್ತಿಯ ಆದರ್ಶ ಗುಣಗಳು ನಮ್ಮ ಜೀವನದಲ್ಲಿ ಅಡಕವಾಗಬೇಕು ಎಂದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಮಾತನಾಡಿ ಅವಕಾಶ ವಂಚಿತರು ಶಿಕ್ಷಣ ಪಡೆದಾಗ ಮಾತ್ರ ಪ್ರಗತಿ ಕಾಣಲು ಸಾಧ್ಯ. ಆದ್ದರಿಂದ ಸಂಘಟನೆಗಳು ಹೆಚ್ಚು ಕ್ರೀಯಾಶೀಲರಾಗಿ ಸಮಾಜದ ಏಳ್ಗೆಗೆ ಶ್ರಮಿಸಬೇಕು ಎಂದರು.

ಈ ವೇಳೆಯಲ್ಲಿ ಪುರಸಭೆ ಸದಸ್ಯರಾದ ಪ್ರಭು ಗಂಗಣಿ, ರಮೇಶ್ ಬೊಮ್ಮನಹಳ್ಳಿ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಜಿಲ್ಲಾ ಸಂಚಾಲಕ ಮರಿಯಪ್ಪ ಮೇತ್ರೆ, ಮುಖಂಡರಾದ ಉದಯಕುಮಾರ್ ಸಾಗರ್, ನರಸಪ್ಪ ಚಿನ್ನಕಟ್ಟಿ, ಆನಂದ ಕಲ್ಲಕ, ಬಸಣ್ಣ ತಳವಾರ್, ಸಾಬಣ್ಣ, ರಾಯಪ್ಪ ಚಂದ್ರಕಲಾ, ಸಾಬಣ್ಣ ಬರ್ಲಿ, ನಾಗಪ್ಪ ಕಲ್ಲಕ, ಚಂದ್ರಶೇಖರ್ ನಾಟಿಕರ್, ಜಗನ್ನಾಥ್ ಮುಡಬುಳಕರ್, ಸುರಾಜ್ ಕಲ್ಲಾಕ್, ಶಿವು, ಹುಸನಪ್ಪ, ಶಿವರಾಯ ಕಲ್ಲಕ,ಗಂಗಮ್ಮ ಕಲ್ಲಕ, ವಿಜಯಕುಮಾರ್ ಬರ್ಲಿ, ಕಾಶಪ್ಪ ಕಲಕ, ಶಂಭುಲಿಂಗ ಬುರ್ಲಿ, ಯಲ್ಲಮ್ಮ, ಮಲ್ಲಪ್ಪ ನಾಟಿಕರ್, ಚಂದ್ರಕಾಂತ ಬುರ್ಲಿ, ಶ್ಯಾಮರಾಯ ಕಲಕ, ರಾಣಪ್ಪ, ಮೋನಪ್ಪ ನಾಟಿಕರ್, ಮಲ್ಲಪ್ಪ ಕದ್ದರ್ಗಿ, ಸಂಗಪ್ಪ ಬಡಿಗೇರ್, ಸೇರಿದಂತೆ ಇತರರಿದ್ದರು.