ಅಂಬೇಡ್ಕರರು ಜಗತ್ತಿಗೆ ಮಾದರಿಯಾದ ಸಂವಿಧಾನ ರಚಿಸಿದ್ದಾರೆ:ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ

ಬೀದರ್. ಏ. 14: ಕಳೆದ 75 ವರ್ಷಗಳಿಂದ ನಮ್ಮ ಪ್ರಜಾಪ್ರಭುತ್ವದ ತಳಹದಿ ಇನ್ನೂ ಗಟ್ಟಿಯಾಗಿ ಇರಲು ಕಾರಣ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಜಗತ್ತಿಗೆ ಮಾದರಿಯಾದ ಸಂವಿಧಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.

ಅವರು ರವಿವಾರ ಡಾ. ಬಿ. ಆರ್. ಅಂಬೇಡ್ಕರರ 133 ನೇ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಅಂಬೇಡ್ಕರರು ತಮ್ಮ ಮುಂದಾಲೋಚನೆ ಮೂಲಕ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ ಅದು ಇಂದು ದೇಶದ ಎಲ್ಲಾ ಜನರ ಹಿತವನ್ನು ಕಾಪಾಡುತ್ತಿದೆ. ಅವರ ಜಯಂತಿ ಆಚರಿಸಿದರೆ ಸಾಲದು ಅವರ ಆದರ್ಶ ಮತ್ತು ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ತಮಗೆಲ್ಲರಿಗೂ ಅಂಬೇಡ್ಕರ್ ಜಯಂತಿಯ ಶುಭಾಶಯಗಳು ಎಂದು ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಅವರು ಮಾತನಾಡಿ ಅಂಬೇಡ್ಕರರು ಸಂವಿಧಾನ ಪಿತಾಮಹ. ಮೊದಲ ಕಾನೂನು ಮಂತ್ರಿ ಹಾಗೂ ಶ್ರೇಷ್ಠ ಸಮಾಜ ಸುಧಾರಕ ಹಾಗೂ ಸ್ತ್ರೀ ಸಮಾನತೆಗಾಗಿ ಹೋರಾಡಿದ್ದರು ಮತ್ತು ಅಸ್ಪ್ರಷತೆಯನ್ನು ವಿರೋಧಿಸಿದ್ದರು ಎಂದು ಹೇಳಿದರು

ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ. ಎಸ್.ಎಲ್ ಅವರು ಮಾತನಾಡಿ ಅಂಬೇಡ್ಕರ್ ಬೇರೆ- ಬೇರೆ ದೇಶಗಳ ಸಂಸ್ಕ್ರತಿ ಹಾಗೂ ಆ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಅದರಲ್ಲಿರುವ ಉತ್ತಮ ಅಂಶಗಳನ್ನು ತೆಗೆದುಕೊಂಡು ನಮ್ಮ ದೇಶಕ್ಕೆ ಅನ್ವಯವಾಗುವ ಸಂವಿಧಾನ ರಚಿಸಿದ್ದಾರೆ.

ಅಂಬೇಡ್ಕರರು ಜಗತ್ತಿನ ಶ್ರೇಷ್ಠ ನಾಯಕರಾದ ಕಾರ್ಲ್ ಮಾಕ್ರ್ಸ್ ನಂತಹ ವ್ಯಕ್ತಿಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದರು ಹಾಗಾಗಿ ಇಂದೂ ನಮ್ಮ ದೇಶದಲ್ಲಿ ಕಾರ್ಮಿಕರ ಕಾನೂನು ಬಗ್ಗೆ ಅರಿವೂ ಬಂದಿದೆ. ಅವರಲ್ಲಿರುವ ಸಾಮಥ್ರ್ಯ ಹಾಗೂ ಜ್ಞಾನದಿಂದಲೇ ಅವರು ಬಹು ಎತ್ತರಕ್ಕೆ ಬೆಳೆದಿದ್ದರು. ಅಂಬೇಡ್ಕರರು ನಾಗರಿಕರ ಹಕ್ಕುಗಳು ಹಾಗೂ ಎಲ್ಲರಿಗೂ ಒಳಗೊಂಡಿರುವ ಸಂವಿಧಾನ ರಚಿಸಿದ್ದಾರೆ ಹಾಗಾಗಿ ಇಂದು ನಾವು ಎಲ್ಲರೂ ಬಾಬಾ ಸಾಹೇಬರಿಗೆ ನೆನೆಸುವದರ ಜೊತೆಗೆ ಅವರ ಜಯಂತಿಯನ್ನು ಆಚರಿಸುತ್ತಿದ್ದೆವೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪೂಜೆ ಸಲ್ಲಿಸಿದ ನಂತರ ಬೀದರ ನಗರದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್. ಎಲ್. ಸೇರಿದಂತೆ ಇತರೆ ಗಣ್ಯರು ಅಂಬೇಡ್ಕರ್ ಪುತ್ಥಳಿಗೆ ಹೂ ಮಾಲೆ ಹಾಕುವ ಮೂಲಕ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಸಿಂಧು ಎಚ್. ಎಸ್. ಮಾರುತಿ ಬೌದ್ದೆ. ಅನಿಲ ಬೆಲ್ದಾರ. ಫನಾರ್ಂಡೀಸ್ ಹಿಪ್ಪಳಗಾಂವ. ಉಮೇಶ ಸೊರಳಿ. ವಿಜಯಕುಮಾರ ಸೋನಾರೆ. ಬಾಬು ಪಾಸ್ವಾನ್. ಶಿವಕುಮಾರ ನೀಲಿಕಟ್ಟಿ. ಸೇರಿದಂತೆ ಇತರೆ ಮುಖಂಡರು ಉಪಸ್ಥಿತಿದ್ದರು.