
(ಸಂಜೆವಾಣಿ ವಾರ್ತೆ)
ಔರಾದ್ :ಎ.15: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳು ರಾಷ್ಟ್ರ ನಿರ್ಮಾಣಕ್ಕೆ ಅತ್ಯವಶ್ಯಕವಾಗಿವೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪೂರ್ ಅಭಿಪ್ರಾಯಪಟ್ಟರು.
ತಾಲೂಕಿನ ಸಂತಪೂರ್‍ನ ಡಾ. ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ನಡೆದ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಮಾಡಿದ ಹೋರಾಟ ಮತ್ತು ಅಭಿವೃದ್ದಿಯ ಕುರಿತು ಇರುವ ಅವರ ದೂರದೃಷ್ಟಿ ಸದಾ ದೇಶಕ್ಕೆ ಮುನ್ನಡೆಸಲಿದೆ ಎಂದರು.
ಈ ಸಂದರ್ಭದಲ್ಲಿ ಪಿಎ??? ಸಿದ್ದಣ್ಣ ಗಿರಿಗೌಡರ್, ಪಿಡಿಒ ಅಂತೋಷ ಪಾಟೀಲ್, ಯುವ ಚಿಂತಕ ನಂದಾದೀಪ ಬೋರಾಳೆ, ಶಿಕ್ಷಕ ಸಂಜೀವಕುಮಾರ್ ಜುಮ್ಮಾ ಸೇರಿದಂತೆ ಇನ್ನಿತರರಿದ್ದರು.
ತಾಲೂಕಿನಾದ್ಯಂತ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು. ತೆರೆದ ಸಾರೋಟಿನಲ್ಲಿ ಅಂಬೇಡಕರ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು, ಮೆರವಣಿಗೆಯಲ್ಲಿ ಡಿಜೆ ಸಂಗೀತದ ಮುಂದೆ ಯುವಕರು ಕುಣಿದು ಸಂಭ್ರಮಿಸಿದರು.
ಔರಾದ್ ಪಟ್ಟಣದ ತಹಸೀಲ್ ಕಛೇರಿ, ಆದರ್ಶ ಕಾಲೋನಿ, ಹರಿಜನವಾಡಾ, ತಾಪಂ ಕಛೇರಿ, ಪಪಂ ಕಛೇರಿ, ಸಂತಪೂರ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ತಾಲೂಕಿನ ಎಲ್ಲ ಕಛೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ ಜಯಂತಿ ಆಚರಿಸಿ ಅವರ ಆದರ್ಶ ಮತ್ತು ವೈಚಾರಿಕ ಚಿಂತನೆಗಳನ್ನು ಸ್ಮರಿಸಲಾಯಿತು.