ಅಂಬುಲೆನ್ಸನಲ್ಲಿಯೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮನೀಡಿದ ತಾಯಿ

ವಿಜಯಪುರ,ಏ.11- ಹೂವಿನಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕರ್ತವ್ಯನಿರತವಾದ ಅಂಬುಲೆನ್ಸನಲ್ಲಿಯೇ ಅವಳಿ ಹೆಣ್ಣು ಮಕ್ಕಳಿಗೆ ತಾಯಿಯೊಬ್ಬಳು ಜನ್ಮ ನೀಡಿದ ಪ್ರಸಂಗ ನಡೆದಿದೆ.ಬಸವನಬಾಗೇವಾಡಿ ತಾಲ್ಲೂಕಿನ ಬ್ಯಾಕೋಡ ಗ್ರಾಮದ ದಿಲಶಾದ್ ರಫೀಕ್ ಚಪ್ಪರಬಂದ (26) ಜನ್ಮ ನೀಡಿದ ತಾಯಿ. ತಿವ್ರ ಹೇರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಕುಟುಂಬಸ್ಥರು ಅಂಬುಲೆನ್ಸಗೆ ಕರೆ ಮಾಡಿದ್ದಾರೆ. ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಂಬುಲೆನ್ಸ ಮನೆಗೆ ಆಗಮಿಸಿದೆ. ನಂತರ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿಯೇ ತಾಯಿ ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಅಂಬುಲೆನ್ಸಲ್ಲಿದ ಸೂಶ್ರೂಷಕ ಸಿಬ್ಬಂದಿ ರಮೇಶ.ಕೆ ಹಾಗೂ ಚಾಲಕ ಬಸವರಾಜಯ್ಯ ಗುರುಮಠ ಸಿಬ್ಬಂದಿ ಗರ್ಭಿಣಿ ತಾಯಿಗೆ ಯಾವುದೇ ತೊಂದರೆಯಾಗದಂತೆ ಹೆರಿಗೆಗೆ ಬೇಕಾದ ಎಲ್ಲ ಚಿಕಿತ್ಸೆ ನೀಡಿದ್ದಾರೆ. ಜೊತೆಗೆ ಗರ್ಭಿಣಿಯ ತಾಯಿ ಕೂಡಾ ಅಂಬುಲೆನ್ಸನಲ್ಲಿ ಜೊತೆಯಿದ್ದು ಮಗಳ ಆರೈಕೆ ಮಾಡಿದ್ದಾರೆ.