ಅಂಬುಜ ಮನರಂಜನೆ ರಸದೌತಣ

” ಕೆಲವು ದಿನಗಳ ನಂತರ ” ಚಿತ್ರ ನಿರ್ದೇಶನ ಮಾಡಿದ್ದ ಶ್ರೀನಿ ಹನುಮಂತರಾಜು ಹಲವು ವರ್ಷಗಳ ಬಳಿಕ ಇದೀಗ ” ಅಂಬುಜ” ಚಿತ್ರ ನಿರ್ದೇಶನ ಮಾಡಿದ್ದು ಅಪರೂದ ಕಥೆಯ ಮೂಲಕ ಮನರಂಜನೆಯ ರಸದೌತಣ ಉಣಬಡಿದಲು ಸಜ್ಜಾಗಿದ್ದಾರೆ.

ಶುಭ ಪೂಂಜಾ ಚಿತ್ರದಲ್ಲಿ ಅಪರಾಧ ವರದಿಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕಿರುತೆರೆ ನಟಿ ರಜನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕಥೆ, ಸಾಹಿತ್ಯ ಬರೆಯುವ ಜೊತೆಗೆ  ಬಂಡವಾಳವನ್ನೂ ಹಾಕಿದ್ದಾರೆ ನಿರ್ಮಾಪಕ ಕಾಶೀನಾಥ್ ಡಿ ಮಡಿವಾಳವರ್.

ಲಂಬಾಣಿ ಸಮುದಾಯದ ಹಿನ್ನೆಲೆಯ‌ ಕಥೆಯನ್ನು ಮುಂದಿಟ್ಟುಕೊಂಡು ನಿರ್ದೇಶಕ ಶ್ರೀನಿ , ಹಿಂದೆ ಎಂದೂ ಕಂಡು ಕೇಳರಿಯದ ವಿಭಿನ್ನ ಕಥಾ ಹಂದರವನ್ನು  ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದು ನಾಳೆ ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲಿದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಶ್ರೀನಿ, ಚಿತ್ರಮಂದಿರಗಳ ಮಾಲಿಕರೇ ಚಿತ್ರ ಕೇಳಿ ಪಡೆಯುತ್ತಿದ್ದಾರೆ. ಇದು ನಮಗೆ ಪ್ಲಸ್ ಜೊತೆಗೆ ಟ್ರೈಲರ್ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು ಚಿತ್ರದ ಬಗ್ಗೆ ಪಾಸಿಟೀವ್ ವೈಬ್ರೇಷನ್ ಬರಲು ಕಾರಣವಾಗಿದೆ. ಜನರೂ ನೋಡಿ ಚಿತ್ರ ಇಷ್ಟಪಟ್ಟರೆ ನಮ್ಮ ಶ್ರಮ ಸಾರ್ಥಕ ಎಂದರು.

ಸರಿ ಸುಮಾರು 100 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ. ಚಿತ್ರ ಎರಡು ಗಂಟೆ ಹೇಗೆ ಕಳೆಯುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ. ಮೊದಲರ್ದದ ಗೊಂದಲಗಳಿಗೆ ದ್ವಿತಿಯಾರ್ದದಲ್ಲಿ ಉತ್ತರ ನೀಡಿದ್ದೇವೆ. ಎರಡನೇ ಭಾಗ ಭಾವನಾತ್ಮಕವಾಗಿ ಜನರನ್ನು ಹಿಡಿದಿಡುತ್ತದೆ. ಜೊತೆಗೆ ಸಸ್ಪೆನ್ಸ್, ಥ್ರಿಲ್ಲರ್ , ಹಾರರ್ ,ಎಮೋಷನ್ ಸೇರಿ ಕಮರ್ಷಿಯಲ್ ಎಲಿಮೆಂಟ್ ಎನೆಲ್ಲಾ ಇರಬೇಕು ಎನ್ನುವ ಕುರಿತು ಚಿತ್ರದಲ್ಲಿ ಹೇಳಿದ್ದೇವೆ. ಜನರಿಗೆ ಚಿತ್ರ ಮೋಸ ಮಾಡುವುದಿಲ್ಲ ಎನ್ನುವ ಭರವಸೆ ನೀಡಿದರು ಶ್ರೀನಿ. ಚಿತ್ರದಲ್ಲಿ ಸಂಗೀತ ಅತ್ಯುತ್ತಮವಾಗಿ ಮೂಡಿಬಂದಿದೆ. ನಮ್ಮ ಕೆಲಸವನ್ನು ನಾವು ಇಡೀ ತಂಡ ಅಚ್ಚುಕಟ್ಟಾಗಿ ಮಾಡಿದ್ದೇವೆ. ಇನ್ನು ಚಿತ್ರ ನೋಡಿ ಜನ ಹೇಳಬೇಕು ಎಂದರು.