‘ಅಂಬುಜ’ಳಾಗಿ ರಜನಿ ಪ್ರವೇಶ

ಸೈಕಾಲಜಿಕಲ್ ಥ್ರಿಲ್ಲರ್ ” ಅಂಬುಜ” ಚಿತ್ರದ ಮೊದಲ ಹಂತದ ಚಿತ್ರೀಕರಣ ಸದ್ದಿಲ್ಲದೆ ಬೆಂಗಳೂರು ಮತ್ತು ಗದಗ ಸುತ್ತಮುತ್ತ ನಡೆದಿದೆ. ಎರಡನೇ ಹಂತದ ಚಿತ್ರೀಕರಣ ತಿಂಗಳಾಂತ್ಯದಿಂದ ಆರಂಭವಾಗಲಿದೆ.  ಶ್ರೀನಿ ಹನುಮಂತರಾಜ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಕಾಶೀನಾಥ್ ಮಡಿವಾಳವರ್ ಕಥೆ ಬರೆದು ಬಂಡವಾಳ ಹಾಕುತ್ತಿದ್ದಾರೆ.

ಈ ನಡುವೆ ಕಿರುತೆರೆಯಲ್ಲಿ ಮಿಂಚು ಹರಿಸಿರುವ  ನಟಿ “ರಜನಿ” ಅಂಬುಜ ಚಿತ್ರಕ್ಕೆ ಪ್ರವೇಶ ಮಾಡಿದ್ದಾರೆ. ಚಿತ್ರದ ಶೀರ್ಷಿಕೆ  ಪಾತ್ರಕ್ಕೆ  ಜೀವ ತುಂಬುವ ಜೊತೆಗೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಗಟ್ಟಿಗಿತ್ತಿ ಹೆಂಗಸಾಗಿ ಮೊದಲ ಚಿತ್ರದಲ್ಲೇ  ಅವರಿಗೆ ಉತ್ತಮ ಪಾತ್ರ ಸಿಕ್ಕಿದೆ ಎನ್ನುತ್ತಾರೆ ನಿರ್ದೇಶಕ ಶ್ರೀನಿ.

ಚಿತ್ರದಲ್ಲಿ ಶುಭಾಪೂಂಜ, ಕಾಮಿಡಿಕಿಲಾಡಿ ಗೋವಿಂದೇಗೌಡ, ಕಾಮಿಡಿ ಕಿಲಾಡಿ ನಿರ್ದೇಶಕ ಶರಣಯ್ಯ, ಪದ್ಮಜಾರಾವ್, ದೀಪಕ್ ಸುಬ್ರಮಣ್ಯ, ಜಗದೀಶ್ ಹಲ್ಕುಡೆ ಬೇಬಿ ಆಕಾಂಕ್ಷ, ಹಾಗೂ ಸಂದೇಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಚಿತ್ರ ನೈಜ ಘಟನೆತಾಧಾರಿತವಾಗಿದ್ದು ಗದಗದ ಲಂಬಾಣಿ ತಾಂಡಾದಲ್ಲಿಯೇ ಚಿತ್ರೀಕರಣ ಮಾಡಿದ್ದಾರೆ. ಒಂದಷ್ಟು ವಿಶೇಷಗಳೊಂದಿಗೆ ಶೀಘ್ರದಲ್ಲಿಯೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ತಂಡ ಉದ್ದೇಶ ಹೊಂದಿದೆ‌.

ಹಿರಿತೆರೆ ಬಡ್ತಿ

ಅಮೃತ ವರ್ಷಿಣಿ’ ಧಾರಾವಾಹಿಯ  ಅಮೃತ ಪಾತ್ರಧಾರಿ ಯಾಗಿ ಎಲ್ಲರ ಮನೆ ಮಾತಾಗಿದ್ದ ನಟಿ ರಜಿನಿ ‘ಆತ್ಮಬಂಧನ’ ಸೇರಿ ಹಲವಾರು ರಿಯಾಲಿಟಿ ಶೋ ಗಳು ‘ಮಜಾ ಟಾಕೀಸ್ ,ಡ್ಯಾನ್ಸಿಂಗ್ ಸ್ಟಾರ್,‌ ‘ಸ್ಟಾರ್ ಸಿಂಗರ್ ‘ ಹೀಗೆ ಕಿರುತೆರೆಯಲ್ಲಿ‌ ಖ್ಯಾತಿ ಪಡೆದು ಈಗ

“ಅಂಬುಜ” ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶ ಮಾಡಿದ್ದಾರೆ