ಅಂಬಿ ಹುಟ್ಟೂರಿನಲ್ಲಿ ಸುಮಲತಾ ಮತದಾನ

ಭಾರತೀನಗರ: ಮೇ.11:- ದಿ.ಅಂಬರೀಷ್ ಅವರ ಹುಟ್ಟೂರಾದ ಸಮೀಪದ ದೊಡ್ಡರಸಿನಕೆರೆ ಗ್ರಾಮದ ಮತಗಟ್ಟೆ ಸಂಖ್ಯೆ 164ರಲ್ಲಿ ಸಂಸದೆ ಸುಮಲತಾ ಅಂಬರೀಶ್ ಮತ ಚಲಾಯಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ತೆರೆದಿದ್ದ ಮತಕೇಂದ್ರದಲ್ಲಿ ಅವರು ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು.
10 ವರ್ಷಗಳ ಹಿಂದೆ ಅಂಬರೀಶ್ ಜತೆ ದೊಡ್ಡರಸಿನಕೆರೆ ಗ್ರಾಮಕ್ಕೆ ಸುಮಲತಾ ಬಂದಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಅಂಬರೀಶ್ ಮಾತ್ರ ಮತದಾನ ಮಾಡಿದ್ದರು. ಆ ಸಂದರ್ಭದಲ್ಲಿ ಈ ಬಗ್ಗೆ ಸಾರ್ವಜನಿಕರು ಟೀಕೆ ಮಾಡಿದ್ದರು. ಈ ಬಾರಿ ಸಂಸದೆಯಾಗಿರುವ ಕಾರಣ, ಬಿಜೆಪಿ ಸ್ಟಾರ್ ಪ್ರಚಾರಕಿಯಾಗಿರು ವುದರಿಂದ ಮದ್ದೂರು ಕ್ಷೇತ್ರದ ಅಭ್ಯರ್ಥಿ ಎಸ್.ಪಿ.ಸ್ವಾಮಿ ಗೆಲುವಿಗೆ ಶ್ರಮಿಸಿದ್ದರು.
ಸುಮಲತಾ ಜೊತೆ ಎಸ್.ಪಿ.ಸ್ವಾಮಿ, ಅಂಬರೀಷ್ ಸಹೋದರನ ಪುತ್ರ ಮದನ್ ಕುಮಾರ್,ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಪಿ.ಉಮೇಶ್, ಅಂಬಿ ಶಿವು, ಕೇಬಲ್ ಮಧು, ವಕೀಲ ಸಿದ್ದೇಗೌಡ, ಪುಟ್ಟರಾಜು ಇದ್ದರು.
ಜಿಲ್ಲೆಯಲ್ಲಿ ಹೆಚ್ಚು ಸ್ಥಾನ: ಬಿಜೆಪಿಯು ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಲಿದ್ದಾರೆ ಎಂದು ಸುಮಲತಾ ವಿಶ್ವಾಸ ವ್ಯಕ್ತಪಡಿಸಿದರು.
ಮತದಾನ ಎಂಬುದು ನಮ್ಮ ಪ್ರಜಾಪ್ರಭುತ್ವಕ್ಕೆ ಒಂದು ಸಂಭ್ರಮ. ಕೆಲವು ಯುವಕರು ಮತ ಹಾಕಲು ಒಲವು ತೋರುತ್ತಿಲ್ಲ.ಇದು ಸರಿಯಲ್ಲ ಎಂದರು.