ಅಂಬಿಗರ ಚೌಡಯ್ಯ ಶ್ರೇಷ್ಠ ವಚನಕಾರರು:ಲಿಂಗಾರಡ್ಡಿ ನಾಯಕ

ಸೈದಾಪುರ:ಜ.22:ಜಾತಿ ಹಾಗೂ ಅನಿಷ್ಠ ಪದ್ಧತಿಗಳನ್ನು ತನ್ನ ನಿಷ್ಠುರ ವಚನಗಳ ಮೂಲಕ ದೊಡ್ಡ ಕ್ರಾಂತ್ರಿಯನ್ನೇ ಮಾಡಿದ ನಿಜ ಶರಣ ಅಂಬಿಗರ ಚೌಡಯ್ಯ ಶೇಷ್ಠ ವಚನಕಾರರಾಗಿದ್ದಾರೆ ಎಂದು ಮುಖ್ಯಗುರು ಲಿಂಗಾರಡ್ಡಿ ನಾಯಕ ಅಭಿಪ್ರಾಯಪಟ್ಟರು.

  ಇಲ್ಲಿನ ವಿದ್ಯಾ ವರ್ಧಕ ಸಂಘದ ವಿವಿಧ ವಿಭಾಗಗಳ ವತಿಯಿಂದ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದು. ಬಸವಾದಿ ಶರಣರಲ್ಲಿ ಒಬ್ಬರಾದ ಅಂಬಿಗರ ಚೌಡಯ್ಯ ಅಂದಿನ ಶಿವಭಕ್ತಿ, ಕಾಯಕ, ಪರೋಪಕಾರಿ ಹಾಗೂ ಸಮತವಾದಿಯ ಬಗ್ಗೆ ತನ್ನ ನಿಷ್ಠರ ವಚನಗಳ ಮೂಲಕ ಖಂಡಿಸಿದ್ದಾರೆ. ಅವರ ವಿಚಾರಧಾರೆಗಳೊಂದಿಗೆ ನಾವು ಸಾಗೋಣ ಎಂದು ಹೇಳಿದರು. ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ ಸೇರಿದಂತೆ ಇತರರಿದ್ದರು.