ಅಂಬಿಗರ ಚೌಡಯ್ಯ ನಾಮಪಲಕಕ್ಕೆ ಮಾಲಾರ್ಪಣೆ

ಸಿರವಾರ.ಜ.೨೧- ಅಂಬಿಗರ ಚೌಡಯ್ಯ ೧೨ನೇ ಶತಮಾನದ ಬಸವಣ್ಣನವರ ಅನುಯಾಯಿ ಶರಣ. ಸಾವಿರಾರು ವರ್ಷಗಳಿಂದ ಧರ್ಮ-ದೇವರುಗಳ ಬಗೆಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಗುರು ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯ ಹೊಡೆದೋಡಿಸುತ್ತಲೇ ವಿಚಾರ ಪರ ವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದರು ಎಂದು ವಾಣಿಜ್ಯೋದ್ಯಮಿ ಹಾಗೂ ಜೆಡಿಎಸ್ ಹಿರಿಯ ಮುಖಂಡ ಜಿ.ಲೋಕರೆಡ್ಡಿ ಹೇಳಿದರು. ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಅಂಬಿಗರ ಚೌಡಯ್ಯ ನಾಮಪಲಕಕ್ಕೆ ಜಯಂತಿ ಅಂಗವಾಗಿ ಸಮಾಜದ ಮುಖಂಡರು, ಪ.ಪಂಚಾಯತಿ ಸದಸ್ಯರು ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಅವರು ನಿಜಶರಣ ಅಂಬಿಗರ ಚೌಡಯ್ಯನವರ ಆದರ್ಶಗಳನ್ನು ನಾವೇಲ್ಲರೂ ಪಾಲಿಸಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿನಡೆಯಬೇಕು.
ಚೌಡಯ್ಯನವರ ವಚನಗಳು ನಮ್ಮಲ್ಲರಿಗೂ ದಾರಿದೀಪವಾಗಿವೆ. ಸಮಾಜದಲ್ಲಿಮುಂದೆ ಬರಬೇಕಾದರೆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಒದಗಿಸಬೇಕೆಂದು ಹೇಳಿದರು. ಜೆಡಿಎಸ್ ಯುವ ಮುಖಂಡ ರಾಜಾ ಆದರ್ಶನಾಯಕ ಮಾತನಾಡಿ ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ಅಂಬಿಗರ ಚೌಡಯ್ಯ ನಿಜ ಶರಣರು, ಸಮಾಜದ ಅನಾಚಾರ, ಅತ್ಯಾಚಾರ, ಢಂಬಾಚಾರಗಳನ್ನೂ ನಿರ್ಭಿತಿಯಿಂದ ಕಟುವಾಗಿ ಟೀಕಿಸಿದವನು. ತನ್ನ ವಚನಗಳನ್ನು ವೈಚಾರಿಕ ವಾಗಿ ನಿರೂಪಿಸಿ ಮಹಾ ಮಾನವತಾವಾದಿಯಾಗಿದ್ದಾನೆ. ಅವರು ರಚನೆ ಮಾಡಿದ ಸುಮಾರು ಈತನ ೨೭೮ ವಚನಗಳು ದೊರಕಿವೆ. ಅಂಬಿಗರ ಚೌಡಯ್ಯ ಪರಿಣಾಮ ಬೀರುವಂತೆ ರಚಿಸಿರುವ ಅವನ ವಚನಗಳಲ್ಲಿ ಆಳವಾದ ಅನುಭವ, ಸಾಮಾಜಿಕ ಪ್ರಜ್ಞೆ ಎದ್ದು ಕಾಣುತ್ತದೆ ಎಂದರು.
ಸಮಾಜದ ಮುಖಂಡರಾದ. ತಿಮ್ಮಣ್ಣ ಕಟಿಮನೆ, ರಾಜೇಶ, ರಂಜೀತ್, ರಾಘವೇಂದ್ರ ಖಾಜನಗೌಡ, ಭಿಮೇಶ ಕಲ್ಲಂಗೇರಿ, ವೆಂಕಟೇಶ, ಸುನೀಲ್, ಮಂಜುನಾಥ ಕಟಿಮನೆ, ಕರಿಯಪ್ಪ ಖಾಜನಗೌಡ, ಯಲ್ಲಪ್ಪ ಮಡಿ, ಹನುಮೇಶ,ಅಮರನಾಥ,ಭಿಮರಾಜ, ಹನುಮಂತ ಛಲವಾದಿ, ಪ.ಪಂಚಾಯತಿ ಸರ್ವ ಸದಸ್ಯರು ಇದ್ದರು.