ಅಂಬಿಗರ ಚೌಡಯ್ಯ ಜಯಂತಿ ಹಿನ್ನೆಲೆ ಪೂರ್ವಭಾವಿ ಸಭೆ


ಸಂಜೆವಾಣಿ ವಾರ್ತೆ
ಗಂಗಾವತಿ, ಜ.19: ಜನೇವರಿ 21 ರಂದು ನಗರದ ನಿಜಶರಣ ಅಂಭಿಗರ ಚೌಡಯ್ಯ ಜಯಂತಿ ಆಚರಣೆ ಹಿನ್ನೆಲೆ ಸಕಲ ಸಿದ್ದತೆ ಕೈಗೊಳ್ಳುವಂತೆ ತಹಶೀಲ್ದಾರ್ ಯು.ನಾಗರಾಜ ಹೇಳಿದರು.
ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಹೇಳಿದರು.
ನಗರದ ದುರುಗಮ್ಮ ದೇವಸ್ಥಾನ ಹತ್ತಿರ ವಿರುವ ಅಂಬಿಗರ ಚೌಡಯ್ಯ ವೃತ್ತದಲ್ಲಿ ಹೂವಿನ ಅಲಂಕಾರ ಸೇರಿದಂತೆ ಪೂಜಾ ಕಾರ್ಯಕ್ರಮಕ್ಕೆ ಅಧಿಕಾರಿಗಳು ಸಿದ್ದತೆ ಮಾಡಿಕೊಂಡು ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಣೆ ಮಾಡುವಂತೆ ತಿಳಿಸಿದರು. ಯುವ ಘಟಕದ ತಾಲೂಕಾ ಅಧ್ಯಕ್ಷ ಹನುಮೇಶ ಭಟಾರಿ ಮಾತನಾಡಿ ಅಂದು ಬೆಳಿಗ್ಗೆ 7.30ಕ್ಕೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಪೂಜೆ ಹಮ್ಮಿಕೊಂಡಿದ್ದು, ಸಮಾಜದ ಹಿರಿಯರು, ತಾಲೂಕಾ ಅಧ್ಯಕ್ಷರು ಯುವಘಟಕದ ಅಧ್ಯಕ್ಷರು ಸೇರಿದಂತೆ ಸಮಾಜದ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ಈ ವೇಳೆ ಗಂಗಾಮತ ಸಮಾಜದ ತಾಲೂಕಾ ಅಧ್ಯಕ್ಷ ಈ ಧನರಾಜ, ಕೊಪ್ಪಳ ಜಿಲ್ಲಾ ಗೌರವಾಧ್ಯಕ್ಷರಾದ ಮುಸ್ಟೂರು ರಾಜಶೇಖರ, ಬಿ ಅಶೋಕ, ವೈ ಬಿ ಮನುಗೋಳಿ, ಪರಶುರಾಮ ಮಡ್ಡೇರ್, ನಿಂಗರಾಜಪ್ಪ ಸೇರಿದಂತೆ ಅನೇಕರು ಇದ್ದರು.