ಅಂಬಿಗರ ಚೌಡಯ್ಯ ಜನರಿಗೆ ಅರಿವು ಮೂಡಿಸಿದ ಶ್ರೇಷ್ಠ ವಚನಕಾರರು

ಸೈದಾಪುರ:ಜ.22:ಬಸವಾದಿ ಶರಣರಲ್ಲಿ ಒಬ್ಬರಾಗಿ ಸಮತವಾದಿಯ ಬಗ್ಗೆ ತನ್ನ ನಿಷ್ಠರ ವಚನಗಳ ಮೂಲಕ ಜನರಿಗೆ ಅರಿವು ಮೂಡಿಸಿದ ಶ್ರೇಷ್ಠ ವಚನಕಾರ ನಿಜ ಶರಣ ಅಂಬಿಗರ ಚೌಡಯ್ಯ ಎಂದು ಸಮಾಜದ ಅಧ್ಯಕ್ಷ ತಾಯಪ್ಪ ಚಿಗಿರಿ ಅಭಿಪ್ರಾಯಪಟ್ಟರು.

  ಪಟ್ಟಣದ ನಿಜ ಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಕೋಲಿ ಕಬ್ಬಲಿಗ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವದಲ್ಲಿ ಭಾಗವಹಿಸಿ ಮಾತಾನಾಡಿದರು. ಅವರ ವಚನಗಳು ಇಂದಿಗೂ ನಾವು ಪಾಲಿಸೋಣ. ಎಂದು ಮನವಿ ಮಾಡಿದರು.
    ಇದಕ್ಕೂ ಮುಂಚೆ ಅಂಬಿಗರ ಚೌಡಯ್ಯ ಭಾವಚಿತ್ರವನ್ನು ರೈಲು ನಿಲ್ದಾಣದಿಂದ ಚೌಡಯ್ಯ ವೃತ್ತದ ವರೆಗೆ ವಿವಿಧ ವಾದ್ಯಗಳ ಮೂಲಕ ಮೆರವಣಿಗೆ ನಂತರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕುರುಬ ಸಮಾಜದ ಹಿರಿಯ ಮುಖಂಡ ಚಂದ್ರಶೇಖರ ವಾರದ್, ವಿರಶೈವ ಸಮಾಜದ ಮುಖಂಡ ಪ್ರಕಾಶಗೌಡ ಸೈದಾಪುರ, ಬಸ್ಸುಗೌಡ ಐರೆಡ್ಡಿ, ಯೋಗೇಶ ಕುಮಾರ ದೋಖ, ಗ್ರಾ.ಪಂ ಅಧ್ಯಕ್ಷ ಮಾಳಪ್ಪ ಅರಿಕೇರಿ, ಕೋಲಿ ಸಮಾಜದ ಉಪಾಧ್ಯಕ್ಷ ಶರಣಪ್ಪ ಬೈರಂಕೊಂಡಿ, ಕಾರ್ಯದರ್ಶಿ ಶ್ರೀಶೈಲ ಬಾಗ್ಲಿ, ಹಣಮಂತ ವಡವಟ್, ಸುರೇಶ ಆನಂಪಲ್ಲಿ, ವೆಂಕಟೇಶ ಗಡದ್, ಶರಣಪ್ಪ ಬಾಗ್ಲಿ, ಪ್ರಭು ಗೂಗಲ್, ಇಮಾಮ್ ಹೆಗ್ಗಣಗೇರಾ, ಬಸವರಾಜ ಹಿರೇನೂರು, ಬಸವಂತ ಬೆಳಗುಂದಿ, ಮರೆಪ್ಪ ರಾಂಪೂರು, ಗಜೇಂದ್ರ, ಲಕ್ಷ್ಮಣ, ಸಾಬಣ್ಣ, ಹಣಮಂತ ಬಾಗ್ಲಿ, ಸಾಬಣ್ಣ ಗೂಗಲ್, ಬಸವಲಿಂಗಪ್ಪ ಬಾಗ್ಲಿ, ದೇವಿಂದ್ರಪ್ಪ ಚಿಗರಿ, ಸಾಬಣ್ಣ ನಾಗರಬಂಡಾ, ಸಾಬಣ್ಣ ಲಿಂಗದಳ್ಳಿ, ಚನ್ನಮಲ್ಲಪ್ಪ, ಸಾಬು ಸೇರಿದಂತೆ ಇತರರಿದ್ದರು.