ಅಂಬಿಗರ ಚೌಡಯ್ಯನವರ ತತ್ವ ಮತ್ತು ಸಿದ್ದಾಂತಗಳನ್ನು ನಮ್ಮಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಸಚಿವ ರಹೀಂಖಾನ

ಬೀದರ. ಜ.23: ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಿದರೆ ಸಾಲದು ಅವರ ತತ್ವ ಮತ್ತು ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ ಹೇಳಿದರು.
ಅವರು ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ ಇವರ ಸಹಯೋಗದಲ್ಲಿ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರ ಬೀದರನಲ್ಲಿ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದಲೆ ತಾವೆಲ್ಲರೂ ಭಾಗವಹಿಸಿದ್ದಿರಿ ತಮ್ಮೆಲ್ಲರಿಗೂ ಅಂಬಿಗರ ಚೌಡಯ್ಯ ಜಯಂತಿ ಶುಭಾಶಯಗಳು. ತಮ್ಮ ಸಮುದಾಯ ಭವನಕ್ಕೆ ಜಾಗವಿದ್ದು ಅನುದಾನ ಇಲ್ಲ ಎಂದು ಹೇಳಿದ್ದಿರಿ ಬರುವ ಈ ಬಜೇಟನಲ್ಲಿ ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಿಸುತ್ತೆನೆ ಎಂದು ಹೇಳಿದರು.
ಹಿಂದೆ ತಮ್ಮ ಸಮುದಾಯದವರು ಮಾಡುತ್ತಿದ್ದ ಕೆಲಸ ಇಂದಿನ ಮಕ್ಕಳಿಗೆ ಮಾಡಲು ಆಗುವುದಿಲ್ಲ ಎಕೆಂದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ ಹಾಗಾಗಿ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಮತ್ತು ತಮ್ಮ ಯಾವುದೇ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ ನಿಮ್ಮೊಂದಿಗೆ ನಾವಿದ್ದೆವೆ ಎಂದು ಹೇಳಿದರು.
ಇಂದು ಸರ್ಕಾರದಿಂದ ಬಹಳಷ್ಟು ಸೌಲಭ್ಯಗಳಿವೆ. ಬೀದರ ನಗರದ ಅಭಿವೃದ್ಧಿಗಾಗಿ ನೂರು ಕೋಟಿ ಅನುದಾನವನ್ನು ರಸ್ತೆ, ಲೈಟ್, ಚರಂಡಿ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗಾಗಿ ಅನುದಾನವನ್ನು ಮುನಸಿಪಾಲಟಿಗೆ ಬಿಡುಗಡೆ ಮಾಡಲಾಗಿದೆ ಎಂದರು.
ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ಬಸವಣ್ಣನವರ 770 ಅಮರಂಗಣಗಳಲ್ಲಿ ನಿಜ ಶರಣ ಅಂಬಿಗರು ಒಬ್ಬರಾಗಿದ್ದ ಅವರು ಬಸವಣ್ಣನವರಿಗೆ ಆತ್ಮೀಯ ಶರಣರಾಗಿದ್ದರು. ಬಸವಣ್ಣನವರು ಕಾಯಕವೇ ಕೈಲಾಸ ಎಂದು ನಂಬಿದ್ದ ಅವರು ಕಾಯಕ ಮಾಡುವವರಿಗೆ ತಮ್ಮ ಅನುಭವ ಮಂಟಪದಲ್ಲಿ ಸ್ಥಾನ ನೀಡಿದ್ದರು ಎಂದರು.
ಬಸವಣ್ಣ, ಅಂಬೇಡ್ಕರ್, ಶಿವಾಜಿಯವರ ಮೂರ್ತಿ ಕೂಡಿಸುವ ಉದ್ದೇಶ ಅವರ ಆದರ್ಶಗಳನ್ನು ನಾವು ತಿಳಿದುಕೊಳ್ಳಬೇಕು ಎಂಬುದಾಗಿದೆ. ಅಂತಹ ಮಾಹಾನ್ ಶರಣರು ಹೇಳಿದ ವಚನಗಳನ್ನು ನಾವು ಓದಿ ತಿಳಿದುಕೊಳ್ಳಬೇಕೆಂದರು.
ನಿಜ ಶರಣ ಅಂಬಿಗರ ಚೌಡಯ್ಯನವರ ಕುರಿತು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಳಗಿ ಕಲಬುರಗಿ ಜಿಲ್ಲೆಯ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ.ಬಿ.ಆರ್. ಅಣ್ಣಾಸಾಗರ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಇಂದು ನಮಗೆ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಬಸವಣ್ಣನವರಂತಹ ನಾಯಕರು ಬೇಕಾಗಿದ್ದಾರೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲಾ ಸಮಾಜದ ಶರಣರಿದ್ದರು. ಅಂಬಿಗರ ಚೌಡಯ್ಯನವರ ಕಾಯಕ ನೋಡಿ ಅವರಿಗೆ ನಿಜ ಶರಣ ಎಂದು ಬಸವಣ್ಣನವರು ಕರೆದಿದ್ದರು ಎಂದರು.
ಅಂದಿನ ಜಾತಿ ವ್ಯವಸ್ಥೆಯ ಜಟಿಲ ಸಮಯದಲ್ಲಿ ಸಮಾಜದ ಸುಧಾರಣೆಗಾಗಿ. ಬುದ್ದ, ಮಹಾವೀರ, ಬಸವಣ್ಣನವರ ನಂತರ ಅಂಬೇಡ್ಕರ್ ಬಂದರು. ಬುದ್ದ ಹೇಳಿದ. ಯಾರು ಹೇಳಿದನ್ನು ನಂಬಬೇಡ ಅದನ್ನು ನೀನು ಪರೀಕ್ಷಿಸಿಕೊಂಡು ನಂಬು ಎಂದು ಹೇಳಿದರು. ನಿಜ ಶರಣ ಅಂಬಿಗರ ಚೌಡಯ್ಯನವರ 300 ವಚನಗಳಿವೆ ಅವುಗಳನ್ನು ಎಲ್ಲರೂ ಓದಿ ತಿಳಿದುಕೊಳ್ಳಬೇಕು ಮತ್ತು ಇದು ಕೇವಲ ಜನವರಿ 21 ಕ್ಕೆ ಸೀಮಿತವಾಗಬಾರದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಸ್ಕೇಟಿಂಗನಲ್ಲಿ ರಾಷ್ಟ್ರಮಟ್ಟದವರೆಗೆ ಹೆಸರು ಮಾಡಿದ ಕೃಷ್ಣವಿ ಜಾಧವ್ ಹಾಗೂ ಸಾಹ್ನವಿ ಜಾಧವ್ ಅವರಿಗೆ ಗಣ್ಯರು ಸನ್ಮಾನಿಸಿದರು ಮತ್ತು ಟೋಕರೆ ಕೋಲಿ ಸಮಾಜದ ನೌಕರ ಸಂಘದಿಂದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಮಹಮ್ಮದ ಗೌಸ್, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಸಿದ್ರಾಮ ಸಿಂಧೆ, ಜಿಲ್ಲಾ ಟೋಕರೆ ಕೋಲಿ ಸಮಾಜದ ಅಧ್ಯಕ್ಷರಾದ ಜಗನ್ನಾಥ ಜಮಾದಾರ, ಅಂಬಿಗರ ಯುವ ಸೇನೆ ಅಧ್ಯಕ್ಷರಾದ ಸುನಿಲ್ ಭಾವಿಕಟ್ಟಿ, ವೈಜನಾಥ ಹೆಡಗಾಪೂರ, ಸುನಿಲ್ ಕಾಶಂಪೂರ, ಧನರಾಜ ಹಂಗರಗಿ, ಅಶೋಕ ವಕ್ರಾಣಿ, ಮಾರುತಿ ಮಾಸ್ಟರ್ ಹಾಗೂ ಅಂಬಿಗರ ಚೌಡಯ್ಯ ಸಮಾಜ ಭಾಂಧವರು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.