ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ

ಚಿಂಚೋಳಿ :ಜ.23:ಪಟ್ಟಣದಲ್ಲಿ ನವ ಯುವಕ ಚೌಡಯ್ಯನ ಸಂಘದ ಬಾಂಧವರು ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚೌಡಯ್ಯನವರ ಜಯಂತಿಯನ್ನು ಆಚರಿಸಿದರು.
ಈ ವೇಳೆ ಸಮಾಜದ ನವ ಯುವಕ ಚೌಡಯ್ಯನ ಸಂಘದ ಅಧ್ಯಕ್ಷ ಸುರೇಶ ಗಾಲಿ, ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯನವರ ಆದರ್ಶಗಳನ್ನು ನಾವೇಲ್ಲರೂ ಪಾಲಿಸಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿನಡೆಯಬೇಕು. ಚೌಡಯ್ಯನವರ ವಚನಗಳು ನಮ್ಮಲ್ಲರಿಗೂ ದಾರಿದೀಪವಾಗಿವೆ. ಸಮಾಜದಲ್ಲಿಮುಂದೆ ಬರಬೇಕಾದರೆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಒದಗಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ:ನವ ಯುವಕ ಚೌಡಯ್ಯರ ಸಂಘದ ಪ್ರಶಾಂತ್ ರಾಮ್ಬಾಯ್,ನವ ಯುವಕ ಚೌಡಯ್ಯರ ಸಂಘದ ಕಾರ್ಯದರ್ಶಿ ಸುಮಂತ ಎಸ್ ಸಂಗೇದ,ಸೋಮಶೇಖರ್ ಚಂಗ್ಲೇರಿ,ಗಿರಿರಾಜ್ ಹುಡುಗಿ,ಮಂಜುನಾ,ನಾಗರಾಜ್,ಅವಿನಾಶ್,ಪ್ರಕಾಶ್,ಶಂಕರ್,ರಮೇಶ್,ಕೃಷ್ಣಕುಮಾರ್,ಅಭಿಷೇಕ್,ಮಹಾಂತೇಶ್ವರ,ನರಸಪ್ಪ,ವಿಶಾಲ್, ಅನಿಲ್,ಅಜಿತ್,ಸೇರಿದಂತೆ ಅನೇಕ ಸಮಾಜದ ಮುಖಂಡರು ಯುವಕರು ಇದ್ದರು