ಅಂಬಾ ಭವಾನಿ ದೇವಸ್ಥಾನದ ಬೀಗ ಮುರಿದು ಚಿನ್ನಾಭರಣ ಕಳವು

ಕಲಬುರಗಿ,ಅ.31-ಇಲ್ಲಿನ ಕನಕ ನಗರದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಅಂಬಾ ಭವಾನಿ ದೇವಸ್ಥಾನದ ಬೀಗ ಮುರಿದು ದೇವಿಗೆ ಭಕ್ತರು ಕೊಟ್ಟಿದ್ದ ಚಿನ್ನಾಭರಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ.
ದೇವಸ್ಥಾನದಲ್ಲಿದ್ದ 25 ಸಾವಿರ ರೂ.ಮೌಲ್ಯದ 5 ಗ್ರಾಂ. ಬೋರಮಳ, 25 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಮಂಗಳಸೂತ್ರ, 3,500 ರೂ.ಮೌಲ್ಯದ 50 ಗ್ರಾಂ.ಬೆಳ್ಳಿ ಛತ್ರಿಯನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಸಂಬಂಧ ದೇವಸ್ಥಾನದ ರಾಜು ಗರಡಕರ ಎಂಬುವವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.