ಅಂಬಾರಾಯ ಚಿನಮಳ್ಳಿಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಕಲಬುರಗಿ:ಆ.24:ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ನಗರದ ರಾಮ ಮಂದಿರ ಹತ್ತಿರದ ಮಾನಕರ್ ಲೇಔಟ್‍ನಲ್ಲಿರುವ ಬಿಸಿಲು ಆರ್ಟ್ ಗ್ರಯಾಲರಿಯಲ್ಲಿ 2023ರ ಅಗಸ್ಟ್ 26 ರಿಂದ 31 ರವರೆಗೆ ಹಿರಿಯ ಚಿತ್ರಕಲಾವಿದ ಅಂಬಾರಾಯ ಚಿನಮಳ್ಳಿ ಅವರು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.

ಈ ಚಿತ್ರಕಲಾ ಪ್ರದರ್ಶನವನ್ನು ಹಿರಿಯ ಚಿತ್ರಕಲಾವಿದ ಬಸವರಾಜ ರೇ ಉಪ್ಪಿನ ಅವರು ಉದ್ಘಾಟಿಸಲಿದ್ದಾರೆ. ಹಿರಿಯ ಚಿತ್ರಕಲಾವಿದ ಬಸವರಾಜ ಎಲ್. ಜಾನೆ ಮತ್ತು ಪ್ರಥಮ ದರ್ಜೆ ಗುತ್ತಿಗೆದಾರ ಶಿವಕಾಂತ ಮಹಾಜನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಿಸಿಲು ಆರ್ಟ್ ಗ್ಯಾಲರಿಯ ಮುಖ್ಯಸ್ಥರಾದ ವ್ಹಿ.ಬಿ. ಬಿರಾದಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಅಂಬಾರಾಯ ಚಿನಮಳ್ಳಿ ಅವರು ಅಕ್ರೆಲಿಕ್ ಮಾಧ್ಯಮದಲ್ಲಿ ರಚಿಸಿದ ಸುಮಾರು 20 ವರ್ಣಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸಮಕಾಲೀನ ಕಲಾವಿದರಲ್ಲಿ, ತಮ್ಮ ವಿಶಿಷ್ಟ ಶೈಲಿಯಿಂದ ಖ್ಯಾತಿ ಗಳಿಸಿರುವ ಇವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಚಿತ್ರಕಲಾ ಪ್ರದರ್ಶನ ಮತ್ತು ಕಲಾಶಿಬಿರಗಳಲ್ಲಿ ಭಾಗವಹಿಸಿದ್ದಾರೆ.