ಅಂಬಾಭವಾನಿ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ

ಬೀದರ:ಜೂ.28:ಜುಲೈ 1 ರಿಂದ 3 ರ ವರೆಗೆ ಬೀದರ ನಗರದ ಶಿವನಗರ(ಉ) ದಲ್ಲಿ ಬರುವ ಮಹಾತ್ಮಾ ಬಸವೇಶ್ವರ ಬಡಾವಣೆಯಲ್ಲಿ ಅಂಬಾಭವಾನಿ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆಯಲಿದೆ.

ಕಾಶಿ ಪಿಠದ ಪಂಡಿತರು ಶ್ರೀ ವೇದ ಮೂರ್ತಿ ಗಂಗಾಧರ ಶಾಸ್ತ್ರಿ ಪುರೋಹಿತರು ಬಾಳೂರ ಇವರು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಷ.ಬ್ರ.ಶ್ರೀ ಗಂಗಾಧರ ಶಿವಾಚಾರ್ಯರು ಹಿರೇಮಠ ಸಂಸ್ಥಾನ ಲಾಡಗೇರಿಹಾಗೂ ಮ.ನಿ.ಪ್ರ.ಶ್ರೀ ಹೊನ್ನಲಿಂಗ ಮಹಾಸ್ವಾಮಿಗಳು ಇವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಜುಲೈ 1 ರಂದು ಬೆಳಗ್ಗೆ 6 ಗಂಟೆಗೆ ಶಿವನಗರದ ಹನುಮಾನ ದೇವಸ್ಥಾನದಿಂದ ದೇವಿ ಮೂರ್ತಿಯ ಮೇರವಣಿಗೆ ಹಾಗೂ ಗಣಪತಿ ಪೂಜೆ, ದೇವತಾ ಅವಾಹನ, ಗೋ ಪೂಜಾ, ಯಾಗಸಾಲಾ, ಮಂಟಪ ಪೂಜೆ, ಜಲಾಧಿವಾಸ ಕಾರ್ಯಕ್ರಮಗಳು ನಡೆಯಲಿವೆ.

ಜುಲೈ 2 ರಂದು ಬೆಳಗ್ಗೆ 7 ಗಂಟೆಗೆ ರುದ್ರಾಭಿಷೇಕ, ಪುಷ್ಪಾಧಿವಾಸ, ಧಾನ್ಯಾಧಿವಾಸ ಕಾರ್ಯಕ್ರಮ ನಡೆಯಲಿದೆ.

ಜುಲೈ 3 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಚಂಡಿಹೋಮ, ರುದ್ರಾಭಿಷೇಕ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಮಹಾ ಪ್ರಸಾದ ವ್ಯವಸ್ಥೆ ನಡೆಲಿದೆ ಎಂದು ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ರಾಜಕುಮಾರ ಲದ್ಧೆ, ಉಪಾಧ್ಯಕ್ಷರಾದ ಎಸ್. ಎನ್ ಬಿರಾದಾರ, ಕಾರ್ಯದರ್ಶಿ ಮಹಾದೇವ ಖರಾಬೆ ಹಾಗೂ ಖಜಾಂಚಿ ಸಂತೋಷ ಲದ್ದೆ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.