ಅಂಬಾಭವಾನಿ ದೇವಸ್ಥಾನ ಅಭಿವೃದ್ಧಿಗೆ ಅನುದಾನ

ದೇವದುರ್ಗ.ಏ.೨೨-ಪಟ್ಟಣದ ವಾರ್ಡ್ ನಂಬರ್ ೯ರ ವ್ಯಾಪ್ತಿಗೆ ಒಳಪಡುವ ಕುಂಬಾರ ಓಣಿಯಲ್ಲಿರುವ ಶ್ರೀಅಂಬಾಭವಾನಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಹತ್ತು ಲಕ್ಷ ರೂ. ಬಿಡುಗಡೆಯಾಗಿದೆ.
ಈ ಹಿನ್ನೆಲೆ ಪುರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಭಕ್ತರು ಬುಧವಾರ ದೇವಸ್ಥಾನಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ನೀಡುವಂತೆ ಉಭಾಳೆ ಸಮುದಾಯದ ಮುಖಂಡರು ಇತ್ತೀಚೆಗೆ ಶಾಸಕ ಕೆ.ಶಿವನಗೌಡ ನಾಯಕಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೇವಸ್ಥಾನ ಅಭಿವೃದ್ಧಿಗೆ ಹತ್ತು ಲಕ್ಷ ರೂ. ಅನುದಾನ ನೀಡಲಾಗಿದೆ.
ಪುರಸಭೆ ಸದಸ್ಯ ಚಂದ್ರಶೇಖರ ಕುಂಬಾರ್, ಎಪಿಎಂಸಿ ನಿರ್ದೇಶಕ ಬಸನಗೌಡ ವೆಂಕಟಪುರ, ಚಂದ್ರಶೇಖರ ಛಲವಾದಿ, ಸತೀಶ್ ಜಾಜಿ ಇತರರು ಇದ್ದರು.