ಅಂಬಾನಿ ಪುತ್ರಿ ಇಶಾಗೆ ಅವಳಿ ಮಕ್ಕಳು

ಮುಂಬೈ, ನ ೨೧- ಉದ್ಯಮಿ ಮುಖೇಶ್ ಅಂಬಾನಿ ಅವರ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.
ಮುಖೇಶ್‌ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ.
ಈ ಮೂಲಕ ಮುಖೇಶ್‌ಅಂಬಾನಿ ಮತ್ತವರ ಪತ್ನಿ ಅಜ್ಜ-ಅಜ್ಜಿಯಾದ ಸಡಗರದಲ್ಲಿದ್ದಾರೆ. ಅಂಬಾನಿ ಕುಟುಂಬಕ್ಕೆ ಹೊಸ ಅತಿಥಿಯ ಆಗಮನದಿಂದ ಮನೆಮಂದಿಯಲ್ಲಿ ಸಂತಸ ಮೂಡಿದೆ.
ನವೆಂಬರ್ ೧೯ ರಂದು ಇಶಾಗೆ ಹೆರಿಗೆಯಾಗಿದೆ. ಒಂದು ಗಂಡು ಮತ್ತು ಹೆಣ್ಣು ಮಗುವಿನ ತಾಯಿಯಾಗಿ ಇಶಾ ಬಡ್ತಿ ಪಡೆದಿದ್ದಾರೆ. ಇಶಾ ಅಂಬಾನಿ ೨೦೧೮ರಲ್ಲಿ ಹಿರಿಯ ಉದ್ಯಮಿ ಅಜಯ್ ಪಿರಾಮಲ್ ಅವರ ಪುತ್ರ ಆನಂದ್ ಪಿರಾಮಲ್‌ಅವರನ್ನು ಮದುವೆಯಾಗಿದ್ದರು. ನಾಲ್ಕು ವರ್ಷಗಳ ಬಳಿಕ ಇಶಾ ಅಮ್ಮನಾಗಿದ್ದಾರೆ.
ಈಗಾಗ್ಲೇ ಇಶಾ ಸಹೋದರ ಆಕಾಶ್‌ಗೆ ಒಬ್ಬ ಮಗನಿದ್ದಾನೆ. ಮುಖೇಶ್‌ಅಂಬಾನಿ ಅವರ ಇನ್ನೋರ್ವ ಪುತ್ರ ಅನಂತ್‌ಅಂಬಾನಿಗೂ ವಿವಾಹ ಕೂಡ ನಿಶ್ಚಯವಾಗಿದೆ.