ಅಂಬಾನಿ ಪರ ಮೋದಿ ಆಡಳಿತ: ನಾಗೇಂದ್ರ

ಮೈಸೂರು:ಜ: 11: ರೈತತ ವಿರೋಧಿ ಕಾನೂನನ್ನು ವಿರೋಧಿಸಿ ಗಣರಾಜ್ಯೋತ್ಸವದ ದಿನ ಲಕ್ಷಾಂತರ ರೈತರಿಂದ ದಿಲ್ಲಿಗೆ ಪರೇಡ್ ನಡೆಸಲಾಗುವುದೆಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗಣರಾಜ್ಯ ಹಾಗೂ ಸಾರ್ವಭೌಮತ್ವದ ಉಳಿವಿಗಾಗಿ ಲಕ್ಷಾಂತರ ಸಂಖ್ಯೆಯಲ್ಲಿ ರೈತರು-ಕಾರ್ಮಿಕರು ದಿಲ್ಲಿಯಲ್ಲಿ ಪ್ರವೇಶಿಸಿ ಈ ಚಳುವಳಿಯನ್ನು ಹಮ್ಮಿಕೊಂಡಿದ್ದು, ಕೇಂದ್ರ ಬಿಜೆಪಿ ಸರ್ಕಾರ ಗಣರಾಜ್ಯೋತ್ಸವದ ಅಸ್ಥಿತ್ವವನ್ನು ಹಾಳು ಮಾಡುತ್ತಿದೆ. ಈ ಭಾಗದ ಲಕ್ಷಾಂತರ ರೈತರು ಲಕ್ಷ ಟ್ರಾಕ್ಟರ್‍ಗಳಲ್ಲಿ ದಿಲ್ಲಿಗೆ ಹೊರಡುವ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮ ಈ ಚಳುವಳಿಯ ಮುಖ್ಯ ಮುದ್ದೇಶ ಇಡೀ ವಿಶ್ವದ ಗಮನ ಸೆಳೆಯಲು. ಕಳೆದ 47 ದಿನಗಳಿಂದ ರೈತರು ಮಾಡುತ್ತಿರುವ ಹೋರಾಟ-ಚಳುವಳಿ-ಪ್ರತಿಭಟನೆಯನ್ನು ಪ್ರತಿಯೊಬ್ಬರಿಗೂ ತಿಳಿಸಬೇಕೆಂಬುದೆ ನಮ್ಮ ಮುಖ್ಯ ಧ್ಯೇಯ. ಗಣರಾಜ್ಯೋತ್ಸವದ ದಿನವೇ ರೈತರು-ಕಾರ್ಮಿಕರು-ದುಡಿಯುವ ವರ್ಗ ಪರೇಡ್ ಮಾಡುತ್ತಿದೆ ಎಂದರೆ ದೇಶದಲ್ಲಿ ಸರ್ಕಾರ ಸತ್ತುಹೋಗಿದ್ದು, ಸರ್ಕಾರ ಜನರ ಪರವಿಲ್ಲ ಎಂಬ ಅರ್ಥ ಸೂಚಿಸುತ್ತದೆ.
ಪ್ರಜಾಪ್ರಭುತ್ವದಡಿಯಲ್ಲಿ ಆಡಳಿತ ನೀಡಬೇಕಾದ ಸರ್ಕಾರ ಸಂವಿಧಾನದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಅದರ ಆಶೋತ್ತರಗಳಿಗೆ ವಿರುದ್ಧವಾಗಿ ಅಧಿಕಾರಿ ನಡೆಸುತ್ತಿದೆ. ಭಾರತದ ಪ್ರತಿಯೊಂದು ಕ್ಷೇತ್ರವನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಿ ಕಂಪನಿ ಆಡಳಿತಕ್ಕೆ ಒಪ್ಪಿಸುತ್ತಿದೆ. ಅದರಲ್ಲೂ ಅಂಬಾನಿ ಕಂಪನಿಗಳಿಗೆ ಕೇಂದ್ರ ಸರ್ಕಾರ ಹೆಚ್ಚು ಪ್ರಾತಿನಿದ್ಯವನ್ನು ನೀಡುತ್ತಿದೆ.
ನಮಗೆ ಕಾಡುವ ಪ್ರಶ್ನೆ ಎಂದರೆ ಅಂಬಾನಿಗಾಗಿ ಮೋದಿ ಸರ್ಕಾರ ಮಾಡುತ್ತಿದ್ದಾರೆಯೇ…? ಅಥವಾ ದೇಶದ ಜನರ ಪ್ರಗತಿಗಾಗಿ ಆಡಳಿತ ನಡೆಸುತ್ತಿದ್ದಾರೆಯೇ ಎಂದು. ಮೋದಿರವರ ಒಂದೊಂದು ನಿಲ್ಲುವು ಅಂಬಾನಿಗಾಗಿಯೇ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ದಿಲ್ಲಿಯಲ್ಲಿ 47 ದಿನಗಳಿಂದ ಚಳುವಳಿ ಮಾಡುತ್ತಿರುವ ರೈತರನ್ನು ನಡೆಸಿಕೊಳ್ಳುತ್ತಿರುವ ರೀತಿಯಲ್ಲೇ ತಿಳಿಯುತ್ತದೆ ಇವರದ್ದು ರೈತ-ಜನ-ಪ್ರಜಾಪ್ರಭುತ್ವ ಪರದ ರಾಜಕಾರಣವೇ ಎಂದು. ಇತಿಹಾಸವನ್ನು ಕೆದಕಿ ನೋಡಿದರೇ ತಿಳಿಯುತ್ತದೆ ಚಳುವಳಿ-ಹೋರಾಟದ ವಿರುದ್ಧವಾಗಿ ಯಾರೂ ಯಾವ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಂತಹ ಕ್ರೂರಿ ಹಿಟ್ಲರ್‍ನ ಅಂತ್ಯ ಹೇಗಾಯಿತೆಂದು ನಮ್ಮೆಲ್ಲರಿಗೂ ಗೊತ್ತೇ ಇದೆ. ಅಂತ್ಯದಂಚಿನಲ್ಲಿ ಮೋದಿರವರ ಅಧಿಕಾರಿ ನಡೆಯುತ್ತಿದ್ದು, ಬಹಶಃ ಅವರಿಗೂ ತಿಳಿದಿರಬೇಕು ಇದು ಅವರ ಕೊನೆಯ ಅಧಿಕಾರವೆಂದು. ಮೋದಿರವರ ಅಧಿಕಾರವನ್ನು ದೇಶದ ಜನರು-ಹೋರಾಟ-ಪ್ರತಿಭಟನೆಗಳು ಅಂತ್ಯಗೊಳಿಸಲಿದೆ ಎಂದರು.
ಒಟ್ಟಾರೆ ರೈತ ವಿರೋಧಿ ಕಾನೂನು ಹಿಂಪಡೆದು ರೈತರ ಏಳಿಗೆಗಾಗಿ ಪ್ರಧಾನಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.