ಅಂಬಾದೇವಿ ದೇವಸ್ಥಾನಕ್ಕೆ ೪.೩೦ ಎಕರೆ ಭೂಮಿ-ನಾಡಗೌಡ

ಸಿಂಧನೂರು.ಜು೨೨- ಸುಪ್ರಸಿದ್ದಿ ಸಿದ್ದ ಪರ್ವತ ಬಗಳಾ೦ಬಿಕೆ ಅಂಬಾದೇವಿ ದೇವಸ್ಥಾನಕ್ಕೆ ೪ ಎಕರೆ ೩೦ ಗುಂಟೆ ಜಮಿನನ್ನು ಸರಕಾರ ಮಂಜೂರು ಮಾಡಿ ಆದೇಶ ಹೊರಡಿಸಿದೆ ಎಂದು ಮಾಜಿ ಮಂತ್ರಿ ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ತಾಲೂಕಿನ ಸೋಮಲಾಪುರ ಗ್ರಾ.ಪಂ ವ್ಯಾಪ್ತಿಗೆ ಬರುವ ಅಂಬಾಮಠದ ಅಂಬಾದೇವಿ ದೇವಸ್ಥಾನಕ್ಕೆ ಸರ್ವೇ ನಂ.೧೬೩ ರಲ್ಲಿ ೪೭ ಎ.೧೧ ಗು.ಸರಕಾರಿ ಜಮೀನು ಇದ್ದು ಇದರಲ್ಲಿ ೪.ಎ ೩೦ ಗು .ಜಮೀನನ್ನು ದೇವಸ್ಥಾನದ ಹೆಸರಿಗೆ ಮಂಜೂರು ಮಾಡುವಂತೆ ಶಾಸಕ ವೆಂಕಟರಾವ್ ನಾಡಗೌಡ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.
ಶಾಸಕರ ಮನವಿ ಮೇರೆಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳ ೧೯೬೯ ರ ನಿಯಮ ೨೨ (ಎ)(೩)(ಐ)ಅನ್ವಯ ಧಾರ್ಮಿಕ ದತ್ತಿ ಇಲಾಖೆ ಭೂಮಿ ಮಂಜೂರಾತಿ ಮಾಡಿ ಆದೇಶ ಹೊರಡಿಸಿದೆ.ಈ ಹೆಚ್ಚುವರಿ ಭೂಮಿಯಿಂದ ವಿಶಾಲ ಹಾಗೂ ಸುಂದರವಾದ ವಿನ್ಯಾಸದೊಂದಿಗೆ ಅಂಬಾದೇವಿ ಗುಡಿ ನಿರ್ಮಾಣ ಮಾಡಲು ಸಹಾಯ ಮಾಡಿದಂತಾಗುತ್ತದೆ ಎಂದು ಶಾಸಕರು ತಿಳಿಸಿದರು.