ಅಂಬಳಿ ಹಾಲು ಉತ್ಪಾದಕರ ಸಂಘದಅಧ್ಯಕ್ಷರಾಗಿ ಭರಮರೆಡ್ಡಿ ಅವಿರೋಧ ಆಯ್ಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.02: ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿಗೆ ನಿನ್ನೆ ಜ.1 ರಂದು ನಡೆದ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಕೆ.ಭರಮರೆಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭರಮರೆಡ್ಡಿ ಅವರು ಬಳ್ಳಾರಿಯ ಜನತಾ ಬಜಾರ್ ನ ನಿರ್ದೇಶಕರೂ ಆಗಿದ್ದಾರೆ. ಇವರ ಆಯ್ಕೆಗೆ ಜನತಾ ಬಜಾರ್ ಅಧ್ಯಕ್ಷ ಜಿ.ನೀಲಕಂಠಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ಉಪಾಧ್ಯಕ್ಷರಾಗಿ ಕೆ.ಪುಷಗಪಲತಾ, ನಿರ್ದೇಶಕರುಗಳಾಗಿ ಟಿ.ಶಶಿಧರ್.ಎನ್.ನಾಗಪ್ಪ, ಎಸ್.ಕಲ್ಲೇಶ್, ಎಂ.ಭದ್ರಪ್ಪ, ಎಂ.ಅಡೆವೆಪ್ಪ, ಹೆಚ್.ಬಿ.ದುರಗಪ್ಒ, ಕೆ.ಬಿ.ಶಿವಕುಮಾರ್, ಕೆ.ಚಂದ್ರಪ್ಪ, ಟಿ.ಭಾಗ್ಯಮ್ಮ, ಎ.ಎಂ.ನಿರ್ಮಲ, ಎಂ.ಗುರುಬಸಪ್ಪ ಆಯ್ಕೆಯಾಗಿದ್ದಾರೆ.