ಅಂಬಳಿ ಕೋವಿಡ್19 ಆರೋಗ್ಯ ಸುರಕ್ಷಾ ಅಭಿಯಾನ

ಕೊಟ್ಟೂರು, ನ.9: ತಾಲೂಕಿನ ಅಂಬಳಿ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾಡಳಿತ ಜಿಲ್ಲಾಪಂಚಾಯಿತಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಜೀಂ ಪ್ರೇಮ್ ಪೌಂಡೇಶನ್ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆಯ ಕೋವಿಡ್ 19 ಆರೋಗ್ಯ ಸುರಕ್ಷಾ ಅಭಿಯಾನಕ್ಕೆ ತಾಲೂಕು ಪಂಚಾಯಿತಿ ಯೋಜನೆಯಾಧಿಕಾರಿ ಬೆಣ್ಣೆ ವಿಜಯಕುಮಾರ ಚಾಲನೆ ನೀಡಿ ಮಾತನಾಡಿ ತಾಲೂಕಿನಲ್ಲಿ ಬಹುತೇಕ ಕೋವೀಡ್ ಪ್ರಮಾಣ ಕಡಿಮೆಯಾಗಿದ್ದು ಇದನ್ನು ತಡೆಯಲು ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಗಮನ ನೀಡಿ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎಲ್.ನಾಗರಾಜ, ಪಿಡಿಒ ಸೇರಿದಂತೆ ಆನೇಕರಿದ್ದರು.