ಅಂಬಯ್ಯ ನೂಲಿಗೆ ಸರ್ಕಾರಿ ನೌಕರ ಸಂಘದಿಂದ ಸನ್ಮಾನ

ಸಿರವಾರ.ನ.20- ನನ್ನ ವೃತ್ತಿಬಾಂಧವರಿಂದ ಸನ್ಮಾನಿಸಿಕೊಳುತ್ತಿರುವುದುಕ್ಕೆ ಸಂತೋಷದ ಜೊತೆಗೆ ಹುರುಪು ಸಹ ಹೆಚ್ಚಾಗುತ್ತಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ, ನಿವೃತ್ತ ಶಿಕ್ಷಕ ಅಂಬಯ್ಯ ನೂಲಿ ಹೇಳಿದರು. ಪಟ್ಟಣದ ಸರ್ಕಾರಿ ನೌಕರರ ಕಚೇರಿಯಲಿ ತಾಲೂಕ ಸರ್ಕಾರಿ ನೌಕರರಿಂದ ಸನ್ಮಾನಿಸಿಕೊಂಡು ಮಾತನಾಡಿದ ಅವರು ಕಲೆಗೆ ಕಲಾವಿದನಿಗೆ ಅವರ ಸಾಧನೆ ಮೆಚ್ಚಿ ಸರ್ಕಾರದಿಂದ ನೀಡುವ ಪ್ರಶಸ್ತಿಗಿಂತಲೂ ಸಾರ್ವಜನಿಕರು, ವೃತ್ತಿಬಾಂಧವರು ಮಾಡುವ ಸನ್ಮಾನವು ಹೆಚ್ಚಿನ ಸಂತೋಷ ಆನಂದ ನೀಡುತ್ತದೆ. ಶಿಕ್ಷಕನಾದರೂ ಸಂಗೀತದಲ್ಲಿ ನಾನು ಮಾಡಿರುವುದು ಅಲ್ಪ ಸಾಧನೆ, ಹಿಂದೆ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಾಗ ಹಾಗೂ ಈಗ ರಾಜ್ಯೋತ್ಸವ ಪ್ರಶಸ್ತಿಯನ್ನು ಶ್ರೀ ಯಡಿಯೂರಪ್ಪ ನವರಿಂದ ಸ್ವಿಕರಿಸಿಕೊಂಡಿರುವುದು ನನ್ನ ಸೌಭಾಗ್ಯವಾಗಿದೆ ಎಂದರು.
ಅಂಬಯ್ಯ ನೂಲಿ ಬಗ್ಗೆ ನೌಕರ ಸಂಘದ ಅದ್ಯಕ್ಷ ಅಯ್ಯನಗೌಡ ಏರೇಡ್ಡಿ, ಶಿಕ್ಷಕರಾದ ತಿರುಮಲರಾವ್ ಆಚಾರಿ, ಬಸವರಾಜ ಅತ್ತನೂರು,ರಾಮಣ್ಣ, ಬಸವರಾಜ ನಾಯಕ,ವೆಂಕಟೇಶ ಜಕ್ಕಲದಿನ್ನಿ ಮಾತನಾಡಿದರು, ಅಂಗನವಾಡಿ ಮೇಲ್ವಿಚಾರಕಿ ನಾಗಮ್ಮಗೆ ಸನ್ಮಾನಿಸಲಾಯಿತು. ಕಂದಾಯ ನಿರೀಕ್ಷಕ ಶ್ರೀನಾಥ, ಮಹಿಳಾ ಆರೋಗ್ಯ ಸಹಾಯಕಿ ನೀಲಮ್ಮ,ಉಪನ್ಯಾಸಕ ಪಿ.ಪದ್ಮರಾಜ ಭಂಡಾರಿ, ಶಿಕ್ಷಕರಾದ ಬಸವರಾಜ ಮಾ.ಪಾ, ಮಲ್ಲೇಶ ಕಲ್ಲೂರು, ಮಲ್ಲಪ್ಪ ಚಾಗಬಾವಿ, ಬಲವಂತ, ಗುರು ಸಿದ್ದಯ್ಯ,ಬಸವರಾಜಸ್ವಾಮಿ ಸಂಗಪ್ಪಕವಿತಾಳ, ಶಾಂತಮೂರ್ತಿ,ಬಸವರಾಜ ಮೆಗಳಮನೆ ಸೇರಿಮಂತೆ ಇನ್ನಿತರರು ಇದ್ದರು.