ಅಂಬಯ್ಯ ನುಲಿಗೆ ರಾಜ್ಯೋತ್ಸವ ಪ್ರಶಸ್ತಿ – ಸಂತಸ

ರಾಯಚೂರು.ಅ.31- ಜಿಲ್ಲೆಯ ದಾಸರ ನಾಡು ಮಾನ್ವಿ ತಾಲ್ಲೂಕಿನಲ್ಲಿ ಜನಿಸಿದ ಅಂಬಯ್ಯ ನುಲಿ ರವರಿಗೆ ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ಜಿಲ್ಲೆಯ ಜನಕ್ಕೆ ಸಂತೋಷವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಸಂತಸವನ್ನು ಹಂಚಿಕೊಂಡಿದೆ.
ಶಿಕ್ಷಕ ವೃತ್ತಿ ಇದ್ದರೂ ಸಂಗೀತ ಲೋಕದಲ್ಲಿ ಅವರ ಸಾಧನೆ ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ವಚನ ಸಾಹಿತ್ಯದ ಸಂಗೀತ ಮಾಂತ್ರಿಕ ಅಂಬಯ್ಯ ನುಲಿ ರವರ ಸಾಧನೆಯನ್ನು ರಾಜ್ಯ ಸರಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಿರುವುದು ಇಡೀ ಜಿಲ್ಲೆಯ ಸಂಗೀತ ಆಸಕ್ತರಿಗೆ ಏಲ್ಲಿಲ್ಲದ ಸಂತೋಷ ತಂದು ಕೊಟ್ಟಿದೆ. ಅವರ ಕಾಯಕ ಸೇವೆ ನಿರಂತರವಾಗಿರಲಿ ದಾಸರ ನೆಲದಲ್ಲಿ ಜನ್ಮಿಸಿದ ಅವರ ಬದುಕು ಹಸನಾಗಿರಲಿ ಅತ್ಯದ್ಭುತ ಅವರ ಕೃಷಿ ನಮಗೆಲ್ಲ ಹೆಮ್ಮೆ ತಂದಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಾ.ಶರಣಪ್ಪ ಆನೆ ಹೊಸೂರು, ಪ್ರಧಾನ ಕಾರ್ಯದರ್ಶಿ ಪಲುಗುಲ ನಾಗರಾಜ, ಜಿಲ್ಲಾ ಅಧ್ಯಕ್ಷಣಿ ಡಾ. ಅರುಣಾ ಹಿರೇಮಠ ರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.