ಅಂಧ ಸಾಹಿತಿ ಶ್ರೀಹರಿ ಕುಲಕರ್ಣಿಗೆ ಸನ್ಮಾನ

ವಿಜಯಪುರ:ಮೇ.28: ನಗರದ ತೊರವಿ ರಸ್ತೆಯಲ್ಲಿರುವ ಶ್ರೀ ವ್ಯಾಸಮಧ್ವ ಸಂಸ್ಕøತ ವಿದ್ಯಾಲಯದ ವಿಷ್ಣುಸಹಸ್ರನಾಮ ಭವನದಲ್ಲಿ ಇತ್ತೀಚೆಗೆ ಜರುಗಿದ ಭಾಗವತ ಸಪ್ತಾಹದ ಸಂದರ್ಭದಲ್ಲಿ ನಗರದ ಅಂಧ ಸಾಹಿತಿ ಈಗ ವಿಶೇಷ ತಂತ್ರಜ್ಞಾನದಿಂದ ಕೂಡಿದ ಮಾತನಾಡುವ ಗಣಕಯಂತ್ರದ ತರಬೇತಿಯನ್ನು ಗುರುಗಳ ಪರಮಾನುಗ್ರಹದಿಂದ ಪಡೆದು ಲೇಖನಿಯಿಂದ ಅಸಾಧ್ಯವಾದುದನ್ನು ಗಣಕ ಯಂತ್ರದಲ್ಲಿ ಬರೆದ ಇಂಡಿ ತಾಲೂಕಿನ ಜೀರಂಕಲಗಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಸಂಭ್ರಮದ ನೆನಪಿಗಾಗಿ ಶ್ರೀ ಯತಿಕುಲ ಶಿಖಾಮಣಿಯ ದಿವ್ಯ ಸನ್ನಿಧಿ ಎಂಬ ಸಂಗ್ರಾಹ್ಯ ಪುಸ್ತಕ ಬರೆದ ಲೇಖಕ ಶ್ರೀಹರಿ ಗೋಪಾಲ ಕುಲಕರ್ಣಿ ಅವರನ್ನು ವಿದ್ಯಾಲಯದ ಅಧ್ಯಕ್ಷರಾದ ಡಾ. ಉಪೇಂದ್ರ ನರಸಾಪೂರ ಅವರು ಲೇಖಕ ಶ್ರೀಹರಿಯನ್ನು ಶೇಷವಸ್ತ್ರ ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬಾಬುರಾವ ಕುಲಕರ್ಣಿ, ಶ್ರೀಹರಿಯ ತಂದೆ ಗೋಪಾಲ ಕುಲಕರ್ಣಿ (ಜೀರಂಕಲಗಿ) ಮೊದಲಾದವರು ಉಪಸ್ಥಿತರಿದ್ದರು.