ಅಫಜಲಪುರ:ಜು.9: ಇತ್ತೀಚೆಗಷ್ಟೇ ಪುರಸಭೆ ಸದಸ್ಯ ಶಿವಕುಮಾರ ಪದಕಿ ಹಾಗೂ ಪೌರ ಸೇವಾ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಚಲವಾದಿ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ಹೊರವಲಯದಲ್ಲಿರುವ ಶ್ರೀ ನಾಗರಾಜ ಪದಕಿ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ತಾಲೂಕಾ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ವನ ಮಹೋತ್ಸವ ಕಾರ್ಯಕ್ರಮ ಹಾಗೂ ವಿ.ಕೆ.ಜಿ ಸ್ಮಾರಕದ ಅಂಧ ಮಕ್ಕಳ ಬಾಲಕ ಬಾಲಕಿಯರ ವಸತಿ ಸಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಟ್ಟೆ ವಿತರಿಸಲಾಗಿತ್ತು.
ಈ ವೇಳೆ ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳನ್ನು ವಿಚಾರಿಸಿದ ಸಂದರ್ಭದಲ್ಲಿ ಕಳೆದ 3 ವರ್ಷದಿಂದ ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಇರುವ ಕಾರಣ ಶಾಲೆಗೆ ಕೊಳವೆಬಾವಿ ಹಾಕಿಸುವ ಭರವಸೆ ನೀಡಿದ್ದರು.
ಇದಾದ ಕೆಲವೇ ದಿನಗಳ ಬಳಿಕ ಶಿವಕುಮಾರ ಪದಕಿ ಹಾಗೂ ಸಂತೋಷ ಚಲವಾದಿ ಅವರು ಜಂಟಿಯಾಗಿ ಶಾಲಾ ಆವರಣದಲ್ಲಿ ಶನಿವಾರದಂದು ಕೊಳವೆ ಬಾವಿ ಹಾಕಿಸಿದ ಹಿನ್ನೆಲೆ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಶಾಲೆಯ ಮುಖ್ಯಗುರು ಬನಶಂಕರಿ ದೇಶಪಾಂಡೆ ಪ್ರಮುಖರಾದ ರಾಜಶೇಖರ್ ಪಾಟೀಲ್ ರವಿ ನಂದಶೆಟ್ಟಿ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.