ಅಂಧ ಮಕ್ಕಳ ಶಾಲಾ ಕಟ್ಟಡಕ್ಕೆ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಿಂದ ಆರ್ಥಿಕ ನೆರವು

ಕಲಬುರಗಿ:ನ.20:ಗದಗ ಜಿಲ್ಲೆಯ ಹೊಳೆ ಆಲೂರ ಗ್ರಾಮದ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ತಮ್ಮ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯ ಕೋರಿ, ರಾಮಮಂದಿರ ಹತ್ತಿರವಿರುವ ವಿವೇಕಾನಂದ ವಿದ್ಯಾನಿಕೇತನ ಶಾಲೆಯಲ್ಲಿ ಯೋಗ, ಮಲ್ಲಕಂಭ ಮತ್ತು ಸಂಗೀತ ಪ್ರದರ್ಶನವನ್ನು ನೀಡಿದರು. ಶಾಲೆಯ ಪ್ರಿನ್ಸಿಪಾಲ ಸಿದ್ದಪ್ಪ ಭಗವತಿ ಶಾಲೆಯ ವಿದ್ಯಾರ್ಥಿಗಳ ಹಾಗೂ ಪೆÇೀಷಕರ ಪರವಾಗಿ ಒಂದು ಲಕ್ಷ ಇಪ್ಪತ್ತೈದು ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ಸಂಸ್ಥೆಯ ಮುಖ್ಯಸ್ಥೆ ರಾಜ್ಯ ಪ್ರಶಸ್ತಿ ವಿಜೇತೆ ತುಳಸಮ್ಮ ಕೆಲ್ಲೂರ ಅವರಿಗೆ ನೀಡಿದರು.

ಮಕ್ಕಳ ಮಲ್ಲಕಂಬ ಹಾಗೂ ಯೋಗ ಕಾರ್ಯಕ್ರಮ ವೀಕ್ಷಿಸಿ ಮಾತನಾಡಿದ ಅವರು ವಿಶೇಷ ಪ್ರತಿಭೆಯುಳ್ಳ ಮಕ್ಕಳಿಗೂ ಸಾಮಾನ್ಯ ಅವಕಾಶಗಳು ದೊರೆಯಬೇಕು, ನಮ್ಮ ಶಾಲಾ ಮಕ್ಕಳೂ ಕೂಡ ಸಾಮಾಜಿಕ ಜವಾಬ್ದಾರಿ ಅರಿಯಬೇಕು, ಇತರರಿಗೆ ಸಹಾಯ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ವಿಕಲ ಚೇತನರನ್ನು ಪ್ರೀತಿಯಿಂದ ಕಾಣಬೇಕು ಹಾಗೂ ಅವರನ್ನು ಕೂಡ ಮುಖ್ಯವಾಹಿನಿಗೆ ತರುವ ಜವಾಬ್ದಾರಿಯನ್ನು ನಾವೆಲ್ಲರೂ ನಿರ್ವಹಿಸಬೇಕು . ಎಲ್ಲವನ್ನೂ ಸರಕಾರ ಮಾಡಲಾಗದು, ಪ್ರಜ್ಞಾವಂತ ಹಾಗೂ ಸ್ಥಿತಿವಂತ ಪ್ರಜೆಗಳು ಇಂತವರಿಗೆ ಸಹಾಯ ಹಸ್ತ ಚಾಚಬೇಕು ಎಂದರು.

ಅಂಧ ಮಕ್ಕಳ ಮಲ್ಲಗಂಬದ ಪ್ರದರ್ಶನ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿತು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿಕ್ಷಕರು ಇಪ್ಪತ್ತೈದು ಸಾವಿರ ರೂಪಾಯಿ ಹಣ ಸಂಗ್ರಹಿಸಿ ಶಾಲಾ ಕಟ್ಟದಕ್ಕೆ ನೀಡಿದರು. ಕಾರ್ಯಕ್ರಮದಲ್ಲಿ ಷಡಕ್ಷರಿ ಪ್ರಕಾಶನದ ಮುಖ್ಯಸ್ಥರಾದ ಎಸ್ ಎಸ್ ಹಿರೇಮಠ, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.