ಅಂಧ ಮಕ್ಕಳ ಜ್ಞಾನಕ್ಕಾಗಿ ಸಂಗೀತ ಕಾರ್ಯಕ್ರಮ ಶ್ಲಾಘನೀಯ- ಶಿವರಾಜ್ ಪಾಟೀಲ್

ರಾಯಚೂರು,ಜು.೨೪- ಅಂಧ ಮಕ್ಕಳಿಗೆ ಸಂಗೀತ ಜ್ಞಾನವನ್ನು ಕಳಿಸುವುದರ ಮೂಲಕ ಕತ್ತಲೆಯ ಬದುಕಿಗೆ ಬೆಳಕಾಗಿರುವ ಪಂಚಾಕ್ಷರಿ ಗವಾಯಿಗಳ ಪುಣ್ಯ ಸ್ಮರಣೆಯ ಅಂಗವಾಗಿ ಇಂದು ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದರು.
ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪಂಡಿತ್ ಪಂಚಾಕ್ಷರಿ ಗವಾಯಿಗಳ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಂಗೀತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಅದೆಷ್ಟೋ ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ಸಂಗೀತ ಊಟ, ವಸತಿ ನೀಡುತ್ತಾ ಮಕ್ಕಳನ್ನು ಉನ್ನತ ಸ್ಥಾನದಲ್ಲಿರಿಸುವ ಮಹಾನ್ ಚೇತನ ಪಂಚಾಕ್ಷರಿ ಗವಾಯಿಗಳಾಗಿದ್ದು, ಇಂದು ಅವರ ಮಾರ್ಗದರ್ಶನದಲ್ಲಿ ಮಠದಲ್ಲಿ ಅನೇಕ ಅಂದ ಮಕ್ಕಳಿಗೆ ಸಂಗೀತ ಶಿಕ್ಷಣವನ್ನು ನೀಡಲಾಗುತ್ತಿದೆ. ಕಣ್ಣು ಕಳೆದುಕೊಂಡವರನ್ನು ಅವರ ಕುಟುಂಬಸ್ಥರೇ ಭಾರವೆಂದು ಭಾವಿಸುವಾಗ ಅಂದರಿಗೆ ಉಚಿತವಾಗಿ ಶಿಕ್ಷಣ ನೀಡುವ ಪಂಚಾಕ್ಷರಿ ಗವಾಯಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಅಂತಹ ಮಾಹಾನ್ ವ್ಯಕ್ತಿಗಳ ಪುಣ್ಯ ಸ್ಮರಣೆಯನ್ನು ಸಂಗೀತ ಸಮ್ಮೇಳನವಾಗಿ ಏರ್ಪಡಿಸುವುದು ಸಂತಸದ ವಿಚಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ನರಸಿಂಹಲು ವಡವಾಟಿ, ಗಿರಿಜಾಶಂಕರ್, ಮಹಾಂತೇಶ ಪಾಟೀಲ್ ಅತ್ತನೂರು, ಶಶಿರಾಜ್ ಕಡಗೋಲ ಆಮಜನೇಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.