ಅಂಧ ಮಕ್ಕಳನ್ನು ತಾರಾಲೋಕಕ್ಕೆ ಕರೆದೊಯ್ದ ತಾರೇ ಜಮೀನಪರ್

ಕಲಬುರಗಿ,ನ.6-ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪೆÇ್ರೀತ್ಸಾಹಕ ಸೊಸೈಟಿ ಹಾಗೂ ವರ್ನಾಜ್ ಟೆಕ್ನಾಲಜೀಸ್ (ತಾರೆ ಜಮೀನ್ ಪರ್) ಅವರ ಸಹಯೋಗದಲ್ಲಿ ಸರಕಾರಿ ಅಂಧ ಬಾಲಕರ ಪ್ರೌಢ ಶಾಲೆಯ ಮಕ್ಕಳಿಗಾಗಿ ತಾರೇ ಜಮೀನಪರ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮಕ್ಕಳಿಗೆ ಗ್ರಹಗಳ ಬಗ್ಗೆ, ನಕ್ಷತ್ರ ಹುಟ್ಟು ಮತ್ತು ಸಾವು, ಸೂರ್ಯ ಚಂದ್ರ ಗ್ರಹಣದ ಬಗ್ಗೆ ಹಾಗೂ ರಾಕೆಟ್ ಮತ್ತು ಉಪಗ್ರಹಗಳ ಬಗ್ಗೆ ಹಾಗೂ ಅವುಗಳ ಉಪಯೋಗದ ಬಗ್ಗೆ ತಾರಮಂಡಲ ಪ್ರದರ್ಶನದ ಮೂಲಕ ತಿಳಿಸಿಕೊಡಲಾಯಿತು. ವಿಡಿಯೋ ಮುಖಾಂತರ ವೀಕ್ಷಣೆ ಮಾಡಿದರು ಮತ್ತು ಬ್ರಹ್ಮಾಂಡದ ಬಗ್ಗೆ ಕುತೂಹಲದಿಂದ ಮಕ್ಕಳು ಆಲಿಸಿದರು.
ಜಿಲ್ಲಾ ಸಂಯೋಜಕ ಸಾಬಣ್ಣ ಭೋಸಗಿ ಕಾರ್ಯಕ್ರಮ ನಡೆಸಿಕೊಟ್ಟರು, ಶಶಿಕಾಂತ್ ಮತ್ತು, ಶಾಲೆಯ ಅಧೀಕ್ಷಕಿ ಸಂಗಮ್ಮ ಗಾಯಕವಾಡ, ಶಾಲೆಯ ಸಿಬ್ಬಂದಿಗಳು ಮತ್ತು ಮಕ್ಕಳು ತುಂಬಾ ಕುತೂಹಲದಿಂದ ಖಗೋಳದ ಬಗ್ಗೆ ತಿಳಿದುಕೊಂಡರು