ಅಂಧ ಕ್ರೀಡಾಪಟು ವರ್ಷಗೆ ಸನ್ಮಾನ

ಸಂಜೆವಾಣಿ ವಾರ್ತೆ

 ಹಿರಿಯೂರು ಸೆ. 19 -ಜಮಿಯತ್ ಉಲುಮಾ ಎ ಹಿಂದ್ ಹಿರಿಯೂರು ಶಾಖೆ, ಹಾಗೂ ಮುಸ್ಲಿಂ ಜನಾಂಗದ ವತಿಯಿಂದ,  ಭಾರತ ದೇಶಕ್ಕೆ ಕೀರ್ತಿ ತಂದ ಅಂಧ ಮಹಿಳೆಯರ ಕ್ರಿಕೆಟ್ ತಂಡದ ನಾಯಕಿಯಾದ ವರ್ಷ ಉಮಾಪತಿ  ರವರಿಗೆ ಸನ್ಮಾನಿಸಲಾಯಿತು,ಜಮಾತ್ ಉಲಮಾ ಎ ಹಿಂದ್ ಅಧ್ಯಕ್ಷರಾದ ಅಬ್ದುಲ್ಲಾ ಮೌಲಾನಾರವರು ಸನ್ಮಾನಿಸಿದರು ನಿರೂಪಣೆಯನ್ನು ಜಾಕಿರ್ ಹುಸೇನ್ ನೆರವೇರಿಸಿದರು.ಕರವೇ ಡಿಕೆಎಸ್ ದಾದಾಪೀರ್ ರವರು ವಂದಿಸಿದರು,ಮೌಲಾನ ವಸೀಂ ಸಾಹಬ್, ನಯಾಜ್, ಲಾಲು, ಜಪ್ರುದ್ದೀನ್ ಪಂಟು, ಆದಿವಾಲ ಮುನಿರ್, ಅಸ್ಲಾಂ ಪಠಾನ್, ಶಿವು ಅವರು ಉಪಸ್ಥಿತರಿದ್ದರು.