ಅಂಧರ ಚೆಸ್‌ನಲ್ಲಿ ಕಂಚಿನಪದಕ

ಸಂಜೆವಾಣಿ ವಾರ್ತೆಶಿವಮೊಗ್ಗ.ನ.೨: ಏಷ್ಯನ್ ಪ್ಯಾರ ಒಲಂಪಿಕ್ಸ್‌ನ ಅಂಧರ ಚೆಸ್‌ನಲ್ಲಿ  ವಿನೋಬನಗರದ ಕಿಶನ್ ಗಂಗೂಲಿ ೨ ಕಂಚಿನ ಪದಕ ಪಡೆದಿದ್ದಾರೆ.ಈ ಚೆಸ್ ಪಂದ್ಯಾವಳಿಯಲ್ಲಿ ೧೩ ದೇಶದ ರ್ಸ್ಪಗಳಿದ್ದು, ಈ ಪೈಕಿ ಕಿಶನ್ ವೈಯಕ್ತಿಕ ವಿಭಾಗದಲ್ಲಿ ೩ನೇ ಸ್ಥಾನದೊಂದಿಗೆ ಕಂಚಿನ ಪದಕ ಪಡೆಯುವ ಮೂಲಕ ಶಿವಮೊಗ್ಗ ಜಿಲ್ಲೆ ಹಾಗೂ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಚೆಸ್ ಟೀಮ್ ಆಟದಲ್ಲೂ ಕಿಶನ್ ಗಂಗೂಲಿ ೩ನೇ ಸ್ಥಾನದೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.