ಅಂಧತ್ವ ಬರದಂತೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ನ.28 :- ಕಣ್ಣಿನ ಬಗ್ಗೆ ನಿರ್ಲಕ್ಷ್ಯವಹಿಸದೆ ಅದರ  ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಅಂಧತ್ವವನ್ನು ತೊಡೆದುಹಾಕಿ ಎಂದು ಕೂಡ್ಲಿಗಿ ಸ್ನೇಹಿತರ ಬಳಗದ ಅಧ್ಯಕ್ಷ ಅಬ್ದುಲ್ ರೆಹಮಾನ್   ತಿಳಿಸಿದರು.            ಅವರು ಪಟ್ಟಣದ ಶ್ರೀ ಸೊಲ್ಲಮ್ಮದೇವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೂಡ್ಲಿಗಿ ಸ್ನೇಹಿತರ ಬಳಗ ಮತ್ತು ಹೊಸಪೇಟೆ ಅಶ್ವಿನಿ ಹಾಸ್ಪಿಟಲ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕಣ್ಣು ನಮ್ಮ ಬಾಳಿನ ಬೆಳಕಿದ್ದಂತೆ ಅದನ್ನು ಕಾಪಾಡಿಕೊಳ್ಳುವ ಹೊಣೆ ನಮ್ಮದಾಗಿರುತ್ತದೆ ಇದರಿಂದಾಗಿ ಸ್ನೇಹಿತರ ಬಳಗದಿಂದ  ನಾಲ್ಕನೇ ವರ್ಷವೂ ಕಣ್ಣಿನ ಆರೋಗ್ಯ ಕಾಪಾಡುವ ಮತ್ತು ದೋಷವಿದ್ದಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಕಣ್ಣಿನ ದೋಷ ನಿವಾರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಕಣ್ಣಿನ ಆರೋಗ್ಯದ ದೃಷ್ಟಿಯನ್ನರಿತು ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದ್ದು ನುರಿತ ನೇತ್ರ ತಜ್ಞರ ಸಹಕಾರವು ಶಿಬಿರಕ್ಕೆ ನೀಡಿದ್ದಾರೆ ಎಂದು ರೆಹಮಾನ್ ತಿಳಿಸಿದರು.
ಕೂಡ್ಲಿಗಿಯ ಸ್ನೇಹಿತರ ಬಳಗದ ಆಶ್ರಯದಲ್ಲಿ 200ಕ್ಕೂ ಹೆಚ್ಚು  ಜನರಿಗೆ ನೇತ್ರ ತಜ್ಞರು ಕಣ್ಣಿನ ತಪಾಸಣೆಯನ್ನು ಮಾಡಿದ್ದು  ಅದರಲ್ಲಿ120ಕ್ಕೂ ಹೆಚ್ಚು  ಜನರಿಗೆ ಶಸ್ತ್ರ ಚಿಕಿತ್ಸೆ ಮಾಡುವ ಕಾರ್ಯಕ್ರಮವನ್ನು  ಡಿಸೆಂಬರ್ 3 ರಂದು ಅಶ್ವಿನಿ ಹಾಸ್ಪಿಟಲ್ ಹೊಸಪೇಟೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ನೇಹಿತರ ಬಳಗ ಅಧ್ಯಕ್ಷ ಅಬ್ದುಲ್ ರಹಮಾನ್ ತಿಳಿಸಿದರು.                               ಕೂಡ್ಲಿಗಿ ಜೆಸಿಐ ಕೂಡ್ಲಿಗಿ ಗೋಲ್ಡನ್ ಅಧ್ಯಕ್ಷ ಅಬೂಬಕರ್ ಹಾಗೂ ಸ್ನೇಹಿತರ ಬಳಗದ ಸದಸ್ಯರಾದ   ಮುನ್ನಾ,  ದಾದಾ ಕಲಂದರ, ಶರೀಫ್ , ಫಯಾಜ್ , ಉಸುಮ ಖಾದರ್ ಭಾಷಾ, ಮಹಮ್ಮದ್ ನಯಿನ್,  ಲಕ್ಕಪ್ಪ ವಿಜಯಕುಮಾರ್ ಅಬ್ದುಲ್ ವಾಹಿದ್ ಸೈಯದ್ ಸುಗೂರು ಸುರೇಶ್ ಸಲೀಂ ಹಾಗೂ ಇತರರು ಉಪಸ್ಥಿತರಿದ್ದರು.