ಅಂಧಕಾರ ಕಳೆದು ಬೆಳಕಿನ ಕಡೆಗೆ ಕರೆದೊಯ್ಯುವ ಗುರು:ಬಂಥನಾಳ ಶ್ರೀಗಳು

ಇಂಡಿ: ಜು.15:ಅಂದಕಾರ ಕಳೆದು ಬೆಳಕಿನ ಕಡೆಗೆ ಕರೆದೊಯ್ಯುವ ಮಹತ್ತರ ಹೊಣೆಗಾರಿಕೆ ಗುರುವಿನದ್ದು, ಅಂತಹ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಸುದಿನ ಎಂದು ಬಂಥನಾಳದ ಪರಮಪೂಜ್ಯ ಶ್ರೀ ವೃಷಭಲಿಂಗೇಶ್ವರ ಶ್ರೀಗಳು ಹೇಳಿದರು.

ತಾಲೂಕಿನ ಸುಕ್ಷೇತ್ರ ಬಂಥನಾಳದಲ್ಲಿ ಶ್ರೀ ವೃಷಭಲಿಂಗೇಶ್ವರ ಮಠದಲ್ಲಿ ಗುರುಪೂರ್ಣಿಮಾ ನಿಮಿತ್ಯ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ನಿವೃತ್ತ ಪ್ರಾಚಾರ್ಯ ಎ.ಪಿ.ಕಾಗವಾಡಕರ ಮಾತನಾಡಿ ನಶಿಸುತ್ತಿರುವ ಮೌಲ್ಯಗಳ ಪ್ರತಿಪಾದನೆಗೆ ಇಂದಿನ ಮಕ್ಕಳಿಗೆ ಅಗತ್ಯವಾಗಿ ಅನುಸರಿಸುವ ಕ್ರಮವಾಗಬೇಕು. ಇಂತಹ ಉಪಕ್ರಮಗಳಿಂದ ಅದು ಸಾಧ್ಯವಿದೆ ಎಂದರು.

ತಡವಲಗಾದ ರಾಚೊಟೇಶ್ವರ ಶ್ರೀಗಳು,ರಾಯಚೂರ ಜಿಲ್ಲೆಯ ಕಲ್ಲೂರದ ಶಂಕರಾಚಾರ್ಯ ಮಠದ ಶ್ರೀ ಶಿವಾರಮಾನಂದ ಭಾರತಿ,ಜ್ಞಾನ ನಂದ ಮಹಾರಾಜರು .ಆರ್.ಎಸ್.ಬೊಳೆಗಾಂವ ಮಾತನಾಡಿದರು. ಬೆಳಗ್ಗೆ 9 ಗಂಟೆಗೆ ಕರ್ತೃ ಮಹಾ ಗದ್ದುಗೆಗೆ ಮಹಾರುದ್ರಾಭಿಷೇಕ, ಶ್ರೀಗಳವರ ಪಾದಪೂಜೆ ನಂತರ ಮಹಾ ಪ್ರಸಾದ, ಗುರು ಪಾದಪೂಜೆ, ಗುರು ರಕ್ಷೆ, ಸದ್ಗುರುವಿನ ಕುರಿತು ಪ್ರವಚನ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆದವು. ಈ ಕಾರ್ಯಕ್ರಮದ ಸೇವೆಯನ್ನು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ನೇಳಗಿ ಗ್ರಾಮದ ಸಕಲ ಸದ್ಭಕ್ತರು ನೇರವೇರಿಸಿದರು.