ಅಂದ್ರಾಳ ದಲ್ಲಿ ಗೃಹಲಕ್ಷ್ಮಿ ನೋಂದಣಿ ಶಿಬಿರ…ಮಹಿಳೆಯರಿಗೆ ಉಚಿತ ಅನ್ನದಾನ


ಸಂಜೆವಾಣಿ ವಾರ್ತೆ
ಬಳ್ಳಾರಿ.ಆ4, ನಗರದ 8ನೇ ವಾರ್ಡ್ ಅಂದ್ರಾಲ್ ನಲ್ಲಿ ಗೃಹಲಕ್ಷ್ಮೀ ಯೋಜನೆಗಾಗಿ ಮಹಿಳೆಯರಿಂದ ಅರ್ಜಿಗಳ ನೋಂದಣಿ ಕಾರ್ಯಕ್ರಮ ಬಿರುಸಾಗಿ ನಡೆಯುತ್ತಿದ್ದು ತಮ್ಮ ಹೆಸರು ಗಳನ್ನು ನೋಂದಣಿ ಮಾಡಿಕೊಳ್ಳಲು ಬಂದ ಪಲಾ ನುಭವಿಗಳು ತೊಂದರೆ ಯಾಗದಂತೆ ಸ್ಥಳೀಯ ಪಾಲಿಕೆ ಸದಸ್ಯ ರಾಮಾಂಜಿ ನಿ ಇವರು ಅಗತ್ಯ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಿದ್ದಾರೆ.ದಿನ ನಿತ್ಯ 300 ಮಂದಿ ಮಹಿಳೆಯರು ಗೃಹಲಕ್ಷ್ಮಿ ನೋಂದಣಿ ಗಾಗಿ ಬರುತ್ತಿರುವ ಹಿನ್ನೆಲೆ ಯಲ್ಲಿ ಬಾಲಾಜಿ ನಗರದಲ್ಲಿ ಕಂಪ್ಯೂಟರ್ ಸೇವಾ ಕೇಂದ್ರದಲ್ಲಿ ಸಾಲಾಗಿ ಮಹಿಳೆಯರು ಕುಳಿತುಕೊಳ್ಳಲು ಆಸ ನಗಳನ್ನು ಏರ್ಪಾಟು ಮಾಡಿದ್ದಾರೆ.ಮತ್ತು ಅವರಿಗೆ ಉಚಿತವಾಗಿ ಅನ್ನದಾನ ಕುಡಿಯಲು ನೀರಿನ ವ್ಯವಸ್ಥೆ ಮಾಡಿದ್ದಾರೆ.ನೋಂದಣಿ ಸಮಯದಲ್ಲಿ ಸರ್ವರ್ ಸಮಸ್ಯ ಇಂದ ಜಾಸ್ತಿ ಸಮಯ ಕಾಯಬೇಕಾಗಿದೆ.ಅದುದರಿಂದ ಅವರಿಗೆ ಉಚಿತವಾಗಿ ಮಧ್ಯಾಹ್ನ ಸಮಯದಲ್ಲಿ ಊಟ ನೀಡುತ್ತಿರುವುದಾಗಿ ರಾಮಾಂಜನೇಯುಲು ತಿಳಿಸಿದ್ದಾರೆ.ಈ ವರೆಗೆ ಸುಮಾರು 8ನೇ ವಾರ್ಡಿನಲ್ಲಿ 1200 ಮಂದಿಗೆ ಗೃಹ ಲಕ್ಷ್ಮಿ ನೋಂದಣಿ ಮಾಡಿಸಲಾಗಿದೆ ಇನ್ನೂ ನೋಂದಣಿ ಕಾರ್ಯಕ್ರಮ ನಡೆಯುತ್ತಿದೆ ಎಂದರು.

One attachment • Scanned by Gmail