ಅಂದ್ರಾಳ್ ಸಮಸ್ಯೆಗಳ‌ ಪರಿಶೀಲನೆ ಮಾಡಿದ ಶಾಸಕರು

ಬಳ್ಳಾರಿ ನ 02 : ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಇಂದು ಅಂದ್ರಾಳು ಗ್ರಾಮಕ್ಕೆ ಭೇಟಿ ಅಲ್ಲಿನ ಜನರು ಎದುರಿಸುತ್ತಿದ್ದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ ಹಾಗೂ ಬೀದಿ ದೀಪಗಳ ಸಮಸ್ಯೆಗಳನ್ನು ಪರಿಶೀಲನೆ ಮಾಡಿದರು.
ಸಾರ್ವಜನಿಕರಿಗೆ ಯಾವುದೇ ರೀತಿಯಾದ ತೊಂದರೆ ಆಗದಂತೆ, ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಅಂದ್ರಾಳು ರಾಮಾಂಜನಿ, ಸುಬ್ಬರೆಡ್ಡಿ, ಕೋಟಿರೆಡ್ಡಿ, ರಾಮಾಂಜನೇಯ ರೆಡ್ಡಿ, ವೀರೇಶ್, ಮಲ್ಲಿ, ಎರಿಸ್ವಾಮಿ ರೆಡ್ಡಿ ರಾಣಿತೋಟ ವೀರೇಶ್ ,
ವಲಿಬಾಷಾ, ಹನುಮಂತ, ರುದ್ರ, ಹೊನ್ನುರಪ್ಪ, ಬಳ್ಳಾರಿ ರಾಯಚೂರು ಕೊಪ್ಪಳ ಹಾಲು ಒಕ್ಕೂಟ ನಿರ್ದೇಶಕ ವೀರಶೇಖರ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊತ್ಕರ್ ಶ್ರೀನಿವಾಸ್ , ಪಾಲಿಕೆ ಕಾರ್ಯ ನಿರ್ವಾಹಕ ಅಭಿಯಂತರ ಖಾಜಾಹುಸೇನ್, ಫಿರೋಜ್ ಹಾಗೂ 8 ನೇ ವಾರ್ಡಿನ ಪ್ರಮುಖ ಮುಖಂಡರು ಇದ್ದರು.