ಅಂದೂ ವಿದ್ಯಾವಂತ ಮಹಿಳೆಯರಿದ್ದರು: ಜ್ಯೋತಿ

ಸಂಜೆವಾಣಿ ನ್ಯೂಸ್
ಮೈಸೂರು.ಮಾ.21:- ಅನಾದಿಕಾಲದಿಂದಲೂ ಮಹಿಳೆಯರಿಗೆ ಗೌರವ ಕೊಡಲಾಗುತ್ತಿತ್ತು. ಅಂದಿನ ಕಾಲದಲ್ಲಿಯೂ ವಿದ್ಯಾವಂತ ಮಹಿಳೆಯರು ಇದ್ದರು ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಎಚ್.ಪಿ.ಜ್ಯೋತಿ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೇದದ ಕಾಲದಲ್ಲಿ ,ಮಹಾಭಾರತ ಹಾಗೂ ರಾಮಾಯಣ ಕಾಲದಲ್ಲಿಯೂ ಸಾಕಷ್ಟು ಬುದ್ದಿವಂತ ಮಹಿಳೆಯರು ಇದ್ದರು. ಮಹಾಭಾರತ ಮತ್ತು ರಾಮಾಯಣದ ಕಥೆಗಳನ್ನು ಓದಿದರೆ, ಹೆಣ್ಣು ಮಕ್ಕಳ ಬುದ್ದಿವಂತಿಕೆ ನಮಗೆ ಗೊತ್ತಾಗಲಿದೆ.ಆಗಿನ ಕಾಲಕ್ಕೆ ತಕ್ಕಂತೆ ವಿದ್ಯಾವಂತೆಯರು ಇದ್ದರು ಎಂದರು.
ಗುಪ್ತರ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಸ್? ಗಾರ್ಡ್ ರೀತಿಯಲ್ಲಿ ಇಟ್ಟುಕೊಳ್ಳುತ್ತಿದ್ದರು. ಅವರನ್ನು ಸೂಕ್ತ ಸಮಯ ಬಂದಾಗ ಎದುರಾಳಿಗಳನ್ನು ಎದುರಿಸಲು ಬಳಸಿಕೊಳ್ಳುತ್ತಿದ್ದರು.
ಸಾಹಿತ್ಯ ಕ್ಷೇತ್ರದಲ್ಲಿ ಅಂದಿನ ಕಾಲದಲ್ಲಿ ಅಕ್ಕಮಹಾದೇವಿ, ಸಂಚಿ ಹೊನ್ನಮ್ಮ ಸೇರಿದಂತೆ ಅನೇಕ ಸಾಧನೆ ಮಾಡಿದ್ದಾರೆ. ಅಂದಿನಿಂದಲ್ಲೂ ಇಂದಿನವರೆಗೂ ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ಸಾಧನೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ನಾವು ಪುರುಷರನ್ನು ಗೌರವಿಸಬೇಕು,ಆಗ ನಮಗೂ ಕೂಡ ಅವರು ಗೌರವ ಕೊಡುತ್ತಾರೆ. ಯಾವ ಪುರುಷರು ಮಹಿಳೆಯರನ್ನೂ ಗೌರವಿಸುವುದಿಲ್ಲವೋ, ಅವರು ಮನೆಯಿಂದ ಸಂಸ್ಕಾರವನ್ನು ಕಲಿತುಕೊಂಡಿರುವುದಿಲ್ಲಘಿ. ನಾವು ಹೆಣ್ಣು ಮಕ್ಕಳಿಗೆ ಮನೆಯಿಂದಲ್ಲೇ ಸಂಸ್ಕಾರ ಕೊಟ್ಟಾಗ, ಗಂಡನ ಮನೆಯವರ ಸಹಕಾರದೊಂದಿಗೆ ಚೆನ್ನಾಗಿ ಬದುಕುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಕುಲಪತಿ ಪೆÇ್ರಘಿ.ಶರಣಪ್ಪ ವಿ.ಹಲಸೆ, ಕುಲಸಚಿವ ಪೆÇ್ರಘಿ.ಕೆ.ಬಿ.ಪ್ರವೀಣ್, ಡೀನ್ ಪೆÇ್ರಘಿ.ಎನ್.ಲಕ್ಷ್ಮಿಘಿ, ಪೆÇ್ರಘಿ.ರಾಮನಾಥನ್ ನಾಯ್ಡು ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.