
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.22: ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ವತಿಯಿಂದ, ‘ಅಂತರಾಷ್ಟ್ರೀಯ ಮಾತೃಭಾಷಾ ದಿನ’ ದಂದು ಹೊಸ ಭಾಷಾ ನೀತಿ ಪ್ರಸ್ತಾಪಗಳನ್ನು ವಿರೋಧಿಸಿ, ಮಾತೃಭಾಷೆ ಉಳಿಸಿ ಪ್ರತಿಭಟನೆ ಆಚರಿಸಲಾಯಿತು. ಈ ದಿನವನ್ನು ಆಚರಿಸುವ ಉದ್ದೇಶವೆಂದರೆ ಮಾತೃಭಾಷೆಯನ್ನು ದುರ್ಬಲಗೊಳಿಸುವುದನ್ನು ವಿರೋಧಿಸಿ, ಇಂಗ್ಲೀಷ್ ಭಾಷೆಯನ್ನು ಕೈ ಬಿಡುವುದನ್ನು ವಿರೋಧಿಸಿ, ಹಿಂದಿಯನ್ನು ಏಕೈಕ ಅಧಿಕೃತ ಭಾಷೆ ಮತ್ತು ಬೋಧನಾ ಮಾಧ್ಯಮವನ್ನಾಗಿ ಮಾಡುವುದನ್ನು ವಿರೋಧಿಸಿ ಪ್ರತಿಭಟನೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತೃಭಾಷೆಯ ಪಾತ್ರವನ್ನು ದುರ್ಬಲಗೊಳಿಸುವ, ಇಂಗ್ಲಿಷ್ ಭಾಷೆಯನ್ನು ತೆಗೆದುಹಾಕುವ ಹುನ್ನಾರವನ್ನು, ಹಾಗೂ ಹಿಂದಿ ಭಾಷೆಯ ಹೇ ರಿಕೆಯನ್ನು ವಿರೋಧಿಸಲಾಯಿತು. ಈ ಪ್ರತಿಭಟನೆಯಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಕಾರ್ಯದರ್ಶಿಗಳಾದ ಎಸ್ ಜಿ ನಾಗರತ್ನ ರವರು, ವಿದ್ಯಾರ್ಥಿ ಸಂಘಟನೆಯ ಸದಸ್ಯರುಗಳಾದ ಮಂಜುನಾಥ, ಸಿದ್ದು, ವಿದ್ಯಾವತಿ, ಲಿಂಗರಾಜು ಗೋವಿಂದು, ಜಗದೀಶ್, ಪ್ರಮೋದ್, ಶಂಕರ್, ಮುಂತಾದವರು ಭಾಗವಹಿಸಿದ್ದರು.