ಅಂತ್ಯಸಂಸ್ಕಾರಕ್ಕೆ ಪರದಾಡಿದ ಗ್ರಾಮಸ್ಥರು

ಹರಪನಹಳ್ಳಿ.ಸೆ.೪: ತಾಲೂಕಿನ ಶೃಂಗಾರತೋಟ ಗ್ರಾಮದಲ್ಲಿ ಮೂಕವ್ವನವರ ವಿರೂಪಾಕಪ್ಪ (56) ಎಂಬವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಅಂತ್ಯಸಂಸ್ಕಾರಕ್ಕೆ ಗ್ರಾಮದಿಂದ ಅರ್ಧ ಕಿಲೋ ಮೀಟರ ದೂರದ ಸ್ಮಶಾನಕ್ಕೆ ಶವ ಕೊಂಡೊಯ್ಯುತ್ತಿದ್ದರು. ಮಳೆಯಿಂದಾಗಿ ಮಾರ್ಗ ಮಧ್ಯ ದ ಹಳ್ಳ ತುಂಬಿ ಹರಿಯುತ್ತಿತ್ತು. ಸೊಂಟ ದವರೆಗೆ ನೀರಿರುವ ಹಳ್ಳದಲ್ಲೆ ಮೃತರ ಸಂಬಂಧಿಕರು,ಗ್ರಾಮಸ್ಥರು ಶವವನ್ನು ಹೊತ್ತು ಕೊಂಡು ಹರಸಾಹಸ ಪಟ್ಟು ತೆರಳಿ ಅಂತ್ಯ ಸಂಸ್ಕಾರ ಮಾಡಿದರು.ಈ ಕುರಿತು ಸ್ಪಷ್ಟೀಕರಣ ನೀಡಿದ ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ಶೃಂಗಾರ ತೋಟ ಗ್ರಾಮಕ್ಕೆ ತೆರಳಿ ಸ್ಥಳ ಪರಿಶೀಲಿನೆ ನೆಡಸಿ ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರುಸತತ ಮಳೆಯಾಗಿರುದರಿಂದ ಹಳ್ಳ ತುಂಬಿ ಹರಿಯುತ್ತದೆ. ಯಾರಾದರೂ ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೆ ತೀವ್ರ ಪರದಾಟ ನಡೆಸಬೇಕಾಗುತ್ತದೆ. ರುದ್ರಭೂಮಿಗೆ ಹೋಗಿ ಬರಲು ಉತ್ತಮ ರಸ್ತೆ ಇಲ್ಲ, ರುದ್ರಭೂಮಿಗೆ ಬೇರೆ ಕಡೆ ಜಾಗ ನೀಡಿದರೆ ಈ ಸಮಸ್ಯೆ ತಲೆದೋರುವುದಿಲ್ಲ ಎಂದು ಬೀಚಿ ಅಭಿಮಾನಿಗಳ ಬಳಗದ ತಾಲ್ಲೂಕು ಅಧ್ಯಕ್ಷ ಶೃಂಗಾರತೋಟದ ನಿಂಗರಾಜ ಪತ್ರಿಕೆಗೆ ತಿಳಿಸಿದ್ದಾರೆ