ಅಂತೂ ವರುಣದೇವನ ಆಗಮನ! ನಿಟ್ಟುಸಿರು ಬಿಟ್ಟ ಜನ ಸಾಮಾನ್ಯರು


ಸಂಜೆವಾಣಿ ವಾರ್ತೆ
ಹೊಸಪೇಟೆ ಜು4:ಬಹುತೇಕ ಮುಂಗಾರು ಮುಗಿಯುವ ಹಂತಕ್ಕೆ ಬಂದರೂ ಬಾರದ ಮಳೆ ಅಂತೂ ಸುರಿಯುವ ಮೂಲಕ ಎಂಟ್ರಿ ನೀಡಿದ್ದು ಜನ, ಜಾನುವಾರು ಹಾಗೂ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಆದರೂ ತಕ್ಕಮಟ್ಟಿಗೆ ಮನೆಗಳಿಗೆ ನೀರುನುಗ್ಗಿ ಸಣ್ಣಪುಟ್ಟ ಹಾನಿಗೂ ಕಾರಣವಾಗಿದೆ ಸೋಮವಾರ ಸಂಜೆ ಸುರಿದ ಭಾರಿ ಮಳೆ.
ಹೌದು ಅನೇಕ ದಿನಗಳಿಂದ ಮೊಡ, ಗುಡುಗು, ಸಿಡಿಲುಗಳಿಗೆ ತುಂತುರು ಮಳೆಗೆ ಮಾತ್ರ ಸೀಮಿತವಾಗಿ ಬಹುತೇಕ ಮುಂಗಾರು ಮುಗಿಯವ ಸಂದರ್ಭದಲ್ಲಿ  ಉತ್ತಮ ಮಳೆಯಾಗುವ  ಮೂಲಕ ನಿಟ್ಟೂಸಿರು ಬಿಡುವಂತೆ ಮಾಡಿದೆ ಒಂದು ಗಂಟೆ ನಿರರ್ಗಳವಾಗಿ ಸುರಿದ ಮಳೆ.
ಮನೆಗಳಿಗೆ ನೀರು:
ಇದ್ದಕ್ಕಿದ್ದಂತೆ ಒಂದೆ ಸಮನೆ ಸುರಿಯಲಾರಂಭಿಸಿದ ಮಳೆ ಗುಡುಗು, ಸಿಡಿಲು ಸಮೇತ ತನ್ನ ರುದ್ರ ನರ್ತನ ಆರಂಭಿಸಿದ್ದು ಮೊದಲ ಭಾರಿ ಮಳೆ ಎಂಬುದನ್ನು ಹಾಗೂ ರೈತರಿಗೆ ಮಂದಹಾಸವನ್ನು ಉಂಟುಮಾಡಿದೆ. ನಗರ ಸಿದ್ಧಲಿಂಗಪ್ಪ ಚೌಕಿ, ಗೌಳೇರಹಟ್ಟಿ, ಹಂಪಿ ರಸ್ತೆ ಸುಣ್ಣದ ಬಟ್ಟಿ ಏರಿಯಾಗಳು ಸೇರಿದಂತೆ ಜಬ್ಬಲ ಸರ್ಕಲ್, ಇಂದಿರಾನಗರ, ಗಾಂಧಿನಗರ ಚಿತ್ತವಾಡಿಗಿಯ ಕೆಲ ಪ್ರದೇಶಗಳು ಜಲಾವೃತವಾಗಿದ್ದು ಸರ್ಕಾರಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯೇ ಒಂದು ದ್ವೀಪದಂತೆ ನೀರು ಆವರಿಸಿಕೊಂಡಿತು. ಇನ್ನು ಸ್ಲಂಗಳಲ್ಲಿಂತು ಜನ ಮನೆಗೆ ನುಗ್ಗಿದ ನೀರು ಜನರನ್ನು ಪರದಾಡುವಂತೆ ಮಾಡಿತು. ಹೊಲಗದ್ದೆಗಳಲ್ಲಿಯೂ ನೀರು ನಿಂತು ರೈತರು ಪರದಾಡುವಂತಾಯಿತು. ರಾಯರಕೆರೆಯಲ್ಲಿರವ ನೂರಾರು ಏಕರೆ ಪ್ರದೇಶದಲ್ಲಿ ಬೆಳೆದ ಕಬ್ಬು ಭತ್ತ, ಬಾಳೆ ಬೆಳೆಗಳು ಜಲಾವೃತವಾಗುವಂತಾಗಿತು.  ಪ್ರತಿಭಾರಿಯೂ ಸ್ಲಂಗಳ ಮನೆಗಳಿಗೆ ನುಗ್ಗುವಂತೆ ಈ ಪ್ರದೇಶದಲ್ಲಿಯೂ ಮಳೆಗೆ ಜಲಾವೃತವಾಗುವುದು ಸಾಮಾನ್ಯವಾಗಿದೆ.

One attachment • Scanned by Gmail