
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.24 ಈ ಭಾಗದ ಜೀವನಾಡಿ ಮಾಲ್ವಿ ಜಲಾಶಯಕ್ಕೆ ಇಂದು ಪರೀಕ್ಷಾರ್ಥಕವಾಗಿ ನೀರನ್ನು ಹರಿ ಬಿಡಲಾಯಿತು. ತಾಲೂಕಿನ ಹಳೆ ನಲ್ಕುದ್ರಿ ಹತ್ತಿರ ನಿರ್ಮಿಸಿರುವ ಹೊಂಡಕ್ಕೆ ನೀರು ಬಂದು ಬೀಳುತ್ತಿದ್ದಂತೆ ಜನರ ಹರ್ಷದ್ಗಾರ ಮುಗಿಲ ಮುಟ್ಟಿತ್ತು.
ಬಹು ವರ್ಷಗಳ ರೈತರ ಕನಸಾಗಿದ್ದ ಮಾಲವಿ ಜಲಾಶಯಕ್ಕೆ ಅಂತೂ ಇಂತೂ ನೀರು ಹರಿಯುವುದು ಕಂಡು ಜನರು ಪುಳಕಿತಗೊಂಡರು.
ದಶಕಗಳ ಕಾಲ ರೈತರು ಮಠಾಧೀಶರು ವಿವಿಧ ಸಂಘಟನೆಯ ಪದಾಧಿಕಾರಿಗಳು ಜನಪ್ರತಿನಿಧಿಗಳು ನಿರಂತರ ಹೋರಾಟದ ಫಲವೇ ಇಂದು ಮಾಲಿ ಜಲಾಶಯಕ್ಕೆ ಶಾಶ್ವತ ನೀರು ಕಾಣಲು ಸಾಧ್ಯವಾಯಿತು.
ಶಾಸಕ ಭೀಮಾ ನಾಯ್ಕ್ ಕಾಂಗ್ರೆಸ್ ಸರ್ಕಾರ ಅಧಿಕಾರ ಇದ್ದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನು ಬಿದ್ದು ಕ್ಷೇತ್ರಕ್ಕೆ ಕರೆಸಿಕೊಂಡು ಮಾಲ್ವಿ ಜಲಾಶಯ ಕಾಮಗಾರಿಗೆ ಚಾಲನೆ ನೀಡಿದ್ದರು.
ಮಳೆಗಾಲದಲ್ಲಿಯೂ ಭರ್ತಿಯಾಗದ ಮಾಲವಿ ಜಲಾಶಯಕ್ಕೆ ರಾಜವಾಳದಿಂದ ಏತ ನೀರಾವರಿ ಮೂಲಕ ಮಾಲ್ವಿ ಜಲಾಶಯಕ್ಕೆ ನೀರು ಬಂದರೆ ಈ ಭಾಗದ ಕುಡಿಯುವ ನೀರು ಮತ್ತು ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಇದೇ ರೀತಿ ತಾಲೂಕಿನ ಕೆರೆಗಳಿಗೆ ನೀರು ತುಂಬುವ ಯೋಜನೆ ಜಾರಿಗೊಳಿಸಿದರೆ ತಾಲೂಕು ಸಂಪತ್ಬರಿತವಾಗಿ ಕಾಣಬಹುದು.