ಅಂತೂ ಇಂತೂ ಕಾಲುವೆಗೆ ನೀರು ಬಂತು

 • ಬಿ.ಡಿ.ಹಳ್ಳಿ ಅಕ್ವಡೆಕ್ಟ್ ಸ್ಥಂಭ ಕುಸಿತ
 • ತುಂಗಭದ್ರ ಎಲ್ ಎಲ್ ಸಿ ಸೇತುವೆ.
 • ಸೆ.14 ರಿಂದ ಕಾಲುವೆಯಲ್ಲಿ ನೀರು ಸ್ಥಗಿತ
 • ಮೋಕಾ ಕೆಳ ಭಾಗದ ಬೆಳೆಗೆ ಹಾನಿ
 • 750 ಮೀ ಸೇತುವೆ 58 ಕಂಬ
 • 9,10,12,13 ಸ್ಥಂಭ ಕ್ಕೆ ಧಕ್ಕೆ ಮುಗಿದ ದುರಸ್ಥಿ
 • 1953 ರಲ್ಲಿ ಕಟ್ಟಿದ್ದ ಅಕ್ವಡೆಕ್ಟ್
  ಎನ್.ವೀರಭದ್ರಗೌಡ

  ಬಳ್ಳಾರಿ, ನ.02: ತುಂಗಭದ್ರ ಬಲದಂಡೆಯ ಕೆಳ ಮಟ್ಟದ (ಎಲ್.ಎಲ್.ಸಿ) ಕಾಲುವೆಗೆ ತಾಲೂಕಿನ ಮೋಕಾ ಬಳಿಯ ಅಕ್ವಡೆಕ್ಟ್ ನ ಸ್ಥಂಭ ಕುಸಿದ್ದರಿಂದ ಸೆ.14 ಸ್ಥಗಿತಗೊಳಿಸಿದ್ದ ನೀರಿನ ಸರಬರಾಜನ್ನು ಮತ್ತೆ ಇಂದು ಸಂಜೆಯಿಂದ ಆರಂಭಿಸಲಿದೆ. ಒಣಗಿದ ಭತ್ತದ ಬೆಳೆಗೆ ನೀರು ಸರಬರಾಜು ಮಾಡಲಿದೆ.
  ವೇದಾವತಿ (ಹಗರಿ) ನದಿಯನ್ನು ದಾಟಿಸಿ ಕರ್ನಾಟಕದ 20 ಕ್ಕೂ ಹೆಚ್ಚು ಹಳ್ಳಿಗಳಿಗೆ ಹಾಗು ಆಂದ್ರಪ್ರದೇಶದ 1.5 ಲಕ್ಷ ಎಕರೆಗೆ ಈ ಕಾಲುವೆ ಮೂಲಕ ನೀರು ಒದಗಿಸಲು 1953 ರಲ್ಲಿ ಹಗರಿಗೆ 58 ಪಿಲ್ಲರ್ ಗಳ ಮೂಲಕ ಅಕ್ವಡೆಕ್ಟ್ ಅಂದರೆ ಕೆಳಭಾಗದಲ್ಲಿ ನದಿ ಮತ್ತು ಮೇಲ್ಭಾಗದಲ್ಲಿ ಕಾಲುವೆ ಜೊತೆ ಸೇತುವೆ ನಿರ್ಮಿಸಲಾಗಿತ್ತು.
  ಸೇತುವೆಯ ಅಗಲ ಅಂಜಾದು 750 ಮೀಟರ್ ಇತ್ತು. ನದಿಯಲ್ಲಿ ನೀರು ಹರಿದು ಬಲಬದಿಯಲ್ಲಿ ಹೂಳು ತುಂಬಿ ರೈತರು ಜಮೀನು ಮಾಡಿಕೊಂಡಿದ್ದರು. ಇದರಿಂದ ನೀರಿನ ಹರಿವು ಪ್ರದೇಶ ಕಡಿಮೆ ಇತ್ತು. ಈ ವರೆಗೆ ಹೆಚ್ಚಿನ ಮಳೆ ಇಲ್ಲದೆ ಇರುವ ಪ್ರದೇಶದಲ್ಲಿಯೇ ನೀರು ಹರಿದು ಹೋಗುತ್ತಿತ್ತು.
  ಆದರೆ ಈ ವರ್ಷ ಇತಿಹಾದಲ್ಲಿಯೇ ಡ್ಯಾಂ ನಿರ್ಮಾಣ ಮಾಡಿದಾಗಿನಿಂದಲೂ ತುಂಬದ ವಾಣಿ ವಿಲಾಸ ಸಾಗರ ತುಂಬಿ ಒಂದು ವರೆ ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹಗರಿಗೆ ಹರಿದು ಬಂದಿದ್ದರಿಂದ ಅಕ್ವಡೆಕ್ಟ್ 9, 10,12,13 ನೇ ಕಂಬಗಳು ಶಿಥಿಲಗೊಂಡಿದ್ದವು ಅವುಗಳನ್ನು ತುಂಗಭದ್ರ ಮಂಡಳಿ ದುರಸ್ಥಿ ನಡೆಸಿದ ಸಂದರ್ಭದಲ್ಲಿಯೇ 15 ಕಂಬ ಸಂಪೂರ್ಣವಾಗಿ ಸೆ.13 ರಂದು ಕುಸಿದು ಬಿತ್ತು. ಇದರಿಂದಾಗಿ ನೀರಿನ ಸರಬರಾಜನ್ನು ಸೆ‌.14 ಸ್ಥಗಿತಗೊಳಿಸಲಾಯಿತು.
  ಅಂದಿನಿಂದಲೇ ಮಂಡಳಿಯ ಇಂಜಿನೀಯರ್ ಗಳು ಸ್ಥಳದಲ್ಲಿದ್ದು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿದ್ದತೆಗಳನ್ನು ನಡೆಸಿದ್ದರೂ, ಅದು ಆಮೆ ಗತಿಯಲ್ಲಿ ಸಾಗಿತ್ತು. ಹಾಗ ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾಧ್ಯಮಗಳ ಮೂಲಕ ಕಾಮಗಾರಿಯ‌ನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು ಇಲ್ಲದಿದ್ದರೆ ನೀರು ಇಲ್ಲದೆ ಬೆಳೆದ ಭತ್ತದ ಬೆಳೆ ಒಣಗಲಿದೆಂದು ಎಚ್ಚರಿಸಿದರು. ಆದರೂ ನಿಧಾನಗತಿಯಲ್ಲಿದ್ದಾಗ ಗ್ರಾಮೀಣ ಶಾಸಕ ನಾಗೇಂದ್ರ ಸ್ಥಳಕ್ಕೆ ತೆರಳಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದರು. ಆಗ ಅಧಿಕಾರಿಗಳು ನ.1 ರೊಳಗೆ ತಾತ್ಕಾಲಿಕ ಕಂಬ ನಿರ್ಮಾಣದ ಕಾಮಗಾರಿ ಮಾಡಿ ನೀರು ಬಿಡಲಿದೆಂಬ ಭರವಶೆ ನೀಡಿದ್ದರು. ಆನಂತರ ಆಂದ್ರಪ್ರದೇಶದ ಆದೋನಿ ಶಾಸಕ ಸಾಯಿ ಪ್ರಸಾದ್ ರೆಡ್ಡಿ, ಸಚಿವ, ಆಲೂರು ಶಾಸಕ ಗುಮ್ಮನೂರು ಜಯರಾಂ ಅವರೂ ಸಹ ಬಂದು ಕಾಮಗಾರಿ ವೀಕ್ಷಣೆ ಮಾಡಿ ತ್ವರಿತಗತಿಯಲ್ಲಿ ಕೈಗೊಳ್ಳಲು ಅಧಿಕಾರಿಗಳಿಗೆ ಒತ್ತಡ ಹೇರಿದರು.
  ನಿನ್ನೆ ದಿನ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಕಾಮಗಾರಿ ಪರಿಶೀಲನೆ ಮಾಡಿ ನಂತರ ಕಾಮಗಾರಿ ಮುಗಿದು ನೀರು ಬಿಡುವವರೆಗೂ ತಾವು ಇಲ್ಲಿಂದ ಕದಲುವುದಿಲ್ಲ ಎಂದು ಹೇಳಿ ರಾತ್ರಿ ಸ್ಥಳದಲ್ಲೇ ಮೊಕ್ಕಾಂ ಹೂಡಿದರು. ಅಲ್ಲೀಯೇ ಇದ್ದು ಬೆಳುಗ್ಗೆ ಪರಿಶೀಲಿಸಿ ಅಧಿಕಾರಿಗಳಿಗೆ ತ್ವರಿತವಾಗಿ ಮುಗಿಸಲು ಹೇಳಿ ತೆರಳಿದರು.
  ಕೊನೆ ಕಾಲಕ್ಕೆ ಬಂದು ತಾವೇ ನೀರು ಬಿಡಿಸಿದ್ದಾಗಿ ರೈತರ ಮೆಚ್ಚುಗೆ ಪಡೆಯುವ ಪ್ರಯತ್ನ ಪಡೆಯುತ್ತಾರೆಂದು. ಬೆಂಗಳೂರಿನಲ್ಲಿದ್ದ ಶಾಸಕ ನಾಗೇಂದ್ರ ಅವರು ಬೆಳಗಿನ ಜಾವದೊಳಗೆ ಕಾಮಗಾರಿ ಸ್ಥಳಕ್ಕೆ ಬಂದು ಕೂತರು.
  ಈ ಮಧ್ಯೆ ಶಾಸಕರು, ಸಚಿವರು ಕಾಮಗಾರಿ ಸ್ಥಳದಲ್ಲಿಯೇ ಇದ್ದರಿಂದ. ಡಿಸಿ ಪವನ್ ಕುಮಾರ್ ಮಾಲಪಾಟಿ, ಎಸ್ಪಿ ರಂಜಿತ್ ಕುಮಾರ್, ಎಡಿಸಿ ಮಂಜುನಾಥ್ , ತಹಸಿಲ್ದಾರ್ ವಿಶ್ವನಾಥ್ ಮೊದಲಾದವರೂ ಕಾಮಗಾರಿ ವೇಗ ಮತ್ತಷ್ಟು ವೇಗ ಹೆಚ್ಚಿಸಲು ಸಹಕಾರಿಯಾದರು. ಮತ್ತೆ ಇಂದು ಬೆಳಿಗ್ಗೆ ಆಂದ್ರದ ಸಚಿವ, ಶಾಸಕರು ಬಂದು ತುಂಗಭದ್ರ ಮಂಡಳಿ ಅಧಿಕಾರಿಗಳ ಜೊತೆ ಸಮಾಲೋಜನೆ ಮಾಡಿ ತಾತ್ಕಾಲಿಕ ಕಂಬವನ್ನು ನಿರ್ಮಾಣ ಮಾಡಿ ನೀರು‌ಬಿಡಲು ಮನವಿ ಮಾಡಿದರು.
  ಮಾಜಿಗಳು:
  ಸ್ಥಳಕ್ಕೆ ಈ ಭಾಗದ ಮಾಜಿ ಶಾಸಕರಾದ ಅಲ್ಲಂ ವೀರಭದ್ರಪ್ಪ, ನಾರಾ ಸೂರ್ಯನಾರಾಯಣ ರೆಡ್ಡಿ ಅವರು ಸಹ ಆಗಮಿಸಿ ವೀಕ್ಷಣೆ ಮಾಡಿ ಆದಷ್ಟು ಬೇಗ ಕಾಮಗಾರಿ ಕೈಗೊಂಡು ನೀರು ಬಿಟ್ಟು ಒಣಗುತ್ತಿರುವ ರೈತರ ಬೆಳೆಗೆ ನೀರು ಬಿಡುವಂತೆ ಆಗ್ರಹಿಸಿದರು.
  ಸಂಜೆವೇಳೆಗೆ
  ಸಂಜೆವಾಣಿ ಸ್ಥಳಕ್ಕೆ ಭೇಟಿ ನೀಡಿದಾಗ ಮಧ್ಯಾಹ್ನವೂ ಕಾಮಗಾರಿ ವೇಗದಲ್ಲಿ ಸಾಗಿತ್ತು. ಕಂಬವನ್ನು ಕಟ್ಟಿಗೆಯ ತುಂಡುಗಳು ಮತ್ತು ಕಬ್ಬಿಣ ಪ್ಲೇಟ್ ಗಳಿಂದ ನಿರ್ಮಿಸುವ ಕಾರ್ಯ ನಡೆಯಿತ್ತಿತ್ತು. ಸಂಜೆವೇಳೆಗೆ ಕಾಮಗಾರಿ ಮುಗಿಸಿ ಇಂದು ನೀರನ್ನು ಹರಿಸಲು ಆರಂಭಿಸಲಿದೆ. ಹಂತ ಹಂತವಾಗಿ ನೀರಿನ ಪ್ರಮಾಣವನ್ನು ಹೆಚ್ಚಿಸಲಿದೆಂದು ಹೇಳಿ ಕಾಲುವೆಯಲ್ಲಿ ನೀರು ಸರಬರಾಜು ಸ್ಥಗಿತಗೊಂಡ ಮೇಲೆ ಬೇಸಿಗೆ ಅವಧಿಯಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳಲಿದೆಂದು ತಿಳಿಸಿದರು.
  ಹೂಳು ತೆರವು:
  ಹಗರಿ‌ನದಿಯ ಬಲ ಬದಿಯಲ್ಲಿ ಹೂಳು ತುಂಬಿ ಅದನ್ನು ಗದ್ದೆಯಾಗಿ ಮಾಡಿಕೊಂಡಿದ್ದನ್ನು ಜೆಸಿಬಿಗಳ ಮೂಲಕ ತೆರವುಗೊಳಿಸುವ ಕಾರ್ಯವೂ ನಡೆದಿದೆ.

ರಾಜಕೀಯ ಏನಿಲ್ಲ
ಇಂದು ನೀರು ಬಿಡದಿದ್ದರೆ ಬೆಳೆ ಹಾಳಾಗಿ ನೂರಾರು ರೈತರ ಕ್ಯೋಟ್ಯಾಂತರ ರೂ ಬೆಳೆ ಹಾಳಾಗುತ್ತಿತ್ತು. ಅದಕ್ಕಾಗಿ ನಾನು ಕೆಲ ದಿನಗಳ ಹಿಂದೆಯೇ ಬಂದು ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದ್ದೆ. ತ್ವರಿತವಾಗಿ ಮಾಡಲು ಹೇಳಿದ್ದೆ. ನ 1 ರಂದು ನೀರು ಬಿಡುವುದಾಗಿ ಹೇಳಿದ್ದರು. ನಿನ್ನೆ ಬಿಡದ ಕಾರಣ ರಾತ್ರಿ ಬಂದು ಇಲ್ಲಿ ಕೂತಿರುವೆ. ಜಿಲ್ಲಾ ಉಸ್ತುವಾರಿ ಸಚಿವರು ಬಂದಿದ್ದಾರೆಂದು ರಾಜಕೀಯ ಕಾರಣಕ್ಕೆ ಬಂದಿಲ್ಲ.
ಬಿ.ನಾಗೇಂದ್ರ ಬಳ್ಳಾರಿ ಗ್ರಾಮೀಣ ಶಾಸಕರು.