ಅಂತಿಮ ಹಂತದಲ್ಲಿ `ಧೀರ ಭಗತ್ ರಾಯ್’

ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟದ ಕಥನವನ್ನು ನಿರ್ದೇಶಕ ಕರ್ಣನ್ ಎಸ್ `ಧೀರ ಭಗತ್ ರಾಯ್’ ಹೆಸರಲ್ಲಿ ತೆರೆಗೆ ಕಟ್ಟಿಕೊಡಲು ಮುಂದಾಗಿದ್ದಾರೆ.

ಚಿತ್ರದ ಚಿತ್ರೀಕರಣ ಕೊನೆ ಹಂತದಲ್ಲಿದ್ದು ಸ್ಥಳಕ್ಕೆ ಪತ್ರಕರ್ತರನ್ನು ಆಹ್ವಾನಿಸಿದ್ದ ತಂಡ ಮಾಹಿತಿ ನೀಡಿತು. ಈ ವೇಳೆ ನಿರ್ದೇಶಕ ಕರ್ಣನ್. ಚಿತ್ರದ ಜೀವಾಳವಾಗಿರುವ ನ್ಯಾಯಾಲಯದ ಸನ್ನಿವೇಶ ಚಿತ್ರೀಕರಣ ಮಾಡಲಾಗುತ್ತಿದೆ.ನೆಲ ಮೂಲದ ಕಥೆ . ಯಾರೂ ಕೂಡ ಪ್ರಯತ್ನಿಸದ ವಿಷಯ.ಭೂ ಸುಧಾರಣೆ ಕಾಯ್ದೆ ಜೊತೆಗೆ ಹಲವು ಮಹತ್ವದ ವಿಷಯಗಳನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ, ಕಂಟೆಂಟ್ ನೋಡಿ ಪರಭಾಷಾ ವಿತರಕರು ಮುಂದೆ ಬಂದಿದ್ದಾರೆ ಎನ್ನುವ ಮಾಹಿತಿ ಹಂಚಿಕೊಂಡರು.

ನಟ ರಾಕೇಶ್ ದಳವಾಯಿ,ಲಾಯರ್ ಪಾತ್ರಕ್ಕಾಗಿ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿದ್ದೇನೆ.ವಕೀಲರು ಹೇಗೆ ವಾದ ಮಾಡುತ್ತಾರೆ, ಮ್ಯಾನರಿಸಂ ತಿಳಿದುಕೊಂಡು  ಪಾತ್ರ ಮಾಡುತ್ತಿದ್ದೇನೆ.. ಆರು ದಿನದ ಚಿತ್ರೀಕರಣ ಬಾಕಿ ಇದೆ. ಮುಂದಿನ ತಿಂಗಳು ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಮಾಡಇಮಾರ್ಚ್ ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯೆತೆ ಇದೆ ಎಂದರು.

ನಾಯಕಿ ಸುಚರಿತಾ ಸಹಾಯರಾಜ್ ಸಾವಿತ್ರಿ ಪಾತ್ರ ನಿರ್ವಹಿಸುತ್ತಿದ್ದೇನೆ. ಸಾವಿತ್ರಿ ತುಂಬಾ ಗಟ್ಟಿಗಿತ್ತಿ ಮಹಿಳೆ. ಒಬ್ಬ ಮಹಿಳೆ ಮನಸ್ಸು ಮಾಡಿದ್ರೆ ಸಮಾಜದಲ್ಲಿ ಏನು ಬೇಕಿದರೂ ಸಾಧಿಸಬಹುದು ಎನ್ನುವ ಮಹಿಳೆ ಪಾತ್ರ ಎಂದರು.

ಶರತ್ ಲೋಹಿತಾಶ್ವ, ಪ್ರವೀಣ್ ಹಗಡೂರು, ಎಂ.ಕೆ ಮಠ, ಸುಧೀರ್ ಕುಮಾರ್ ಮುರೊಳ್ಳಿ, ಶಶಿಕುಮಾರ್, ಫಾರೂಕ್ ಅಹ್ಮದ್, ಚಂದ್ರಿಕಾ ಗೌಡ, ನಯನ, ಸಿದ್ದಾರ್ಥ್ ಗೋವಿಂದ್, ಅನಿಲ್ ಹೊಸಕೊಪ್ಪ, ಪೆÇ್ರಫೇಸರ್ ಹರಿರಾಮ್, ಪಿ ಮೂರ್ತಿ, ಹೆಮಾನುಷ್ ಗೌಡ, ರಮೇಶ್ ಕುಮಾರ್, ಸಂದೇಶ್ À ತಾರಾಬಳಗದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಎಂ.ಸೆಲ್ವಂ ಜಾನ್ ಛಾಯಾಗ್ರಹಣವಿದೆ