ಅಂತಿಮ ಸ್ಪರ್ಶ ಪಡೆಯುತ್ತಿರುವ ಕನ್ನಡ ಸಾಹಿತ್ಯ ಸಮೇಳನದ ವೇದಿಕೆ.


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಮಾ10 : ನಾಳೆ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು ವೇದಿಕೆ ಅಂತಿಮ ಸ್ಪರ್ಶದೊಂದಿಗೆ ಸಿದ್ಧವಾಗುತ್ತಿದೆ.
ನೂತನ ವಿಜಯನಗರ ಜಿಲ್ಲೆಯಾದನಂತರ ಪ್ರಥಮವಾಗಿ ಹಾಗೂ ಹೊಸಪೇಟೆ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ರಧಾನ ಕೃಷ್ಣದೇವರಾಯ ವೇದಿಕೆಯ ಕಾರ್ಯಕ್ರಮ ನಡೆಯುವ ಪ್ರೌಢದೇವರಾಯ ಮಂಟಪ ಇದನ್ನು ಪ್ರವೇಶಿಸಲು ಇರುವ ಹರಿಹರ ಮಹಾಧ್ವಾರ, ವೇದಿಕೆಗೆ ಆಗಮಿಸುವ ಕನಕದಾಸ ಮಾರ್ಗ ಅನ್ನದಾಸೋಹದ ಮಹಾಮನೆ ಹಾಗೂ ನಾಡಿನ ದೇಶಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಜಯಪರ್ವ ಸ್ಮರಣ ಸಂಚಿಕೆಯು ಹೊರಬರಲು ಸಿದ್ದಗೊಂಡಿದೆ.
ಬೆಳಿಗ್ಗೆ 7.30ಕ್ಕೆ ಪ್ರವಾಸೋದ್ಯಮ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ವಿಜಯನಗರದ ಶಾಸಕರೂ ಆಗಿರುವ ಆನಂದ್‍ಸಿಂಗ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ ಕನ್ನಡ ಧ್ವಜಾರೋಹಣ ಮಾಡುವರು, ಪರಿಷತ್ ಧ್ವಜವುನ್ನು ತಾಲೂಕು ಘಟಕದ ಅಧ್ಯಕ್ಷ ಡಾ.ನಾಯಕರ ಹುಲಗಪ್ಪ ಆರೋಹಣ ಮಾಡಲಿದ್ದಾರೆ.  ಗಿರೀಶ್ ನೇತ್ರತ್ವದಲ್ಲಿ ಎನ್.ಎಸ್.ಎಸ್ ಮತ್ತು ಎನ್‍ಸಿಸಿ ಧ್ವಜವಂದನೆ ಸಲ್ಲಿಸುವರು ಈ ಎಲ್ಲಾ ಕಾರ್ಯಕ್ರಮಗಳು ನಿವೃತ್ತ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಎಚ್ ಬಾಲರಾಜ್ ಸಮ್ಮೇಳನಾಧ್ಯಕ್ಷತೆಯಲ್ಲಿ ಜರುಗಲಿವೆ.
ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ, ಸಮ್ಮೇಳನದ ಉದ್ಘಾಟನೆ, ವಿಚಾರ ಗೋಷ್ಠಿ, ಕವಿಗೋಷ್ಠಿ, ಸನ್ಮಾನ ಸಮಾರಂಭ, ಸಾಂಸ್ಕೃತಿಕ ಸಂಜೆ 4ನೇ ಸಾಹಿತ್ಯ ಸಮ್ಮೇಳನದ ಆಕರ್ಷಣೆಯಾಗಿ ಮೆರೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಬೇಕಾಗುವ ವೇದಿಕೆ ಸಿದ್ಧತೆಗಳು ಪೂರ್ಣಗೊಂಡಿದ್ದು ಅಂತಿಮ ಸ್ಪರ್ಶ ನೀಡಲಾಗುತ್ತಿದೆ.
ಜಿಲ್ಲಾ ಘಟಕವಲ್ಲದಿದ್ದರೂ ಜಿಲ್ಲಾ ಸಾಹಿತ್ಯ ಸಮ್ಮೇಳದ ಗಾಂಭೀರತೆಯಲ್ಲಿ ಸಮ್ಮೇಳನ ಸಂಘಟಿತವಾಗಿದ್ದು ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದು ಕಾರ್ಯಕ್ರಮಕ್ಕೆ ದಾರಿಯಂತೆ ಸಮ್ಮೇಳನವನ್ನು ಸಂಘಟಿಸಲಾಗುತ್ತಿದೆ ಎಲ್ಲಾ ಸಿದ್ಧತೆಯನ್ನು ಮಾಡಲಾಗಿದೆ ಹೆಚ್ಚು ಹೆಚ್ಚು ಸಾರ್ವಜನಿಕರು ಕನ್ನಡಾಶಕ್ತರು ಪಾಲ್ಗೊಂಡು ಯಶಶ್ವಿಗೊಳಸಬೇಕು
ಕೆ.ಪ್ರಕಾಶ ಪ್ರಧಾನ ಕಾರ್ಯದರ್ಶಿಗಳು ಕಸಾಪ ಹೊಸಪೇಟೆ.