ಅಂತಿಮ ಸುತ್ತಿನ ಹೋರಾಟದಲ್ಲಿ ಮೋತ್ಕರ್

ಬಳ್ಳಾರಿ ಏ 24 : ನಗರ ಪಾಲಿಕೆಯ 24ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಮೋತ್ಕರ್ ನಿನ್ನೆ ಸಂಜೆ ತಮ್ಮ ವಾರ್ಡಿನಲ್ಲಿ ಹಲವು ಬೆಂಬಲಿಗರೊಂದಿಗೆ ತೆರಳಿ ಮತದಾರರ ಬಳಿ ತಮಗೆ ಮತ ನೀಡುವಂತೆ ಅಂತಿಮ ಸುತ್ತಿನ ಹೋರಾಟ ಎಂಬಂತೆ ಬಿರುಸಿನಲ್ಲಿ ಸಂಚರಿಸಿ ಮನವಿ ಮಾಡಿದರು.
ಈ ಮೊದಲೇ ಈ ವಾರ್ಡಿನಿಂದ ಸ್ಪರ್ಧೆ ಮಾಡಬೇಕು ಎಂದು ನಿಶ್ಚಯಸಿಕೊಂಡಿದ್ದ ಮೋತ್ಕರ್ ಅವರು, ಮತದಾರರ ಬಳಿ ಈ ಮೊದಲು ಅನೇಕ ಬಾರಿ ಅವರನ್ನು ಭೇಟಿ ಮಾಡಿ ಅವರ ಸಂಕಷ್ಟಗಳಿಗೆ ಸ್ಪಂದಿಸಿದ್ದರು. ಇದರಿಂದಾಗಿ ಅವರು ತಮ್ಮ ಗೆಲುವಿನ ಹಾದಿಯನ್ನು ಸುಲಭವಾಗಿರಿಸಿಕೊಂಡಿದ್ದಾರೆ ಎನ್ನಬಹುದು.