ಅಂತಾರಾಷ್ಟ್ರೀಯ ಸಾಕ್ಷರತಾ ದಿನ

ಸಾಕ್ಷರತೆಯ ಮಹತ್ವವನ್ನು ಜನರಿಗೆ ನೆನಪಿಸಲು ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ.ವಿಶ್ವದಲ್ಲಿನ ಸಾಕ್ಷರತೆಯ ಗುಣಮಟ್ಟದಲ್ಲಿ ಸುಧಾರಣೆಯನ್ನು ತೋರಿಸುವ ಹಿನ್ನೆಲೆಯಲ್ಲಿ ಯುನೆಸ್ಕೋ ಈ ದಿನವನ್ನು ಸಾಕ್ಷರತಾ ದಿನವನ್ನಾಗಿ ಘೋಷಿಸಿತು.

1965 ನವೆಂಬರ್ 17 ರಲ್ಲಿ ಯುನೆಸ್ಕೋ ಸೆಪ್ಟೆಂಬರ್ 8 ಅನ್ನು ವಿಶ್ವ ಸಾಕ್ಷರತಾ ದಿನವನ್ನಾಗಿ ಘೋಷಿಸಿತು. 1965 ರಲ್ಲಿ ಇರಾನಿನಲ್ಲಿ ನಡೆದ ವಿಶ್ವ ಸಂಸ್ಥೆಯ ಸಭೆಯಲ್ಲಿ ಜಗತ್ತಿನಲ್ಲಿ ಅನಕ್ಷರತೆಯನ್ನು ಇನ್ನಿಲ್ಲದಂತೆ ಮಾಡಬೇಕು ಎಂಬ ನಿರ್ಧಾರ ಕೈಗೊಂಡು ಸಾಕ್ಷರತಾ ದಿನವನ್ನು ಜಾರಿಗೆ ತರಲಾಯಿತು.

ಯುನೆಸ್ಕೋ ಪ್ರಕಾರ, ಅಂತರರಾಷ್ಟ್ರೀಯ ಸಾಕ್ಷರತಾ ದಿನ 2021 ರ ಥೀಮ್ ಏನೆಂದರೆ “ಮಾನವ ಕೇಂದ್ರಿತ ಚೇತರಿಕೆಗೆ ಸಾಕ್ಷರತೆ: ಡಿಜಿಟಲ್ ವಿಭಜನೆಯನ್ನು ಕಿರಿದಾಗಿಸುವುದು”. ಕಳೆದ ಎರಡು ವರ್ಷಗಳಲ್ಲಿ ಕೊರೋನಾವೈರಸ್ ಸಾಂಕ್ರಾಮಿಕದಿಂದಾಗಿ ಜಗತ್ತು ನಡುಗಿ ಹೋಗಿದೆ. ಆರ್ಥಿಕತೆ, ಅಭಿವೃದ್ಧಿ ಮತ್ತು ಮಕ್ಕಳ ಕಲಿಕೆಯ ಮೇಲೂ ತೀವ್ರ ಪರಿಣಾಮ ಬೀರಿದೆ. ಈಗಿನ ಸಂದರ್ಭದಲ್ಲಿ ಆನ್‌ಲೈನ್ ಮೂಲಕವೇ ಕೆಲಸ ಮತ್ತು ಶಿಕ್ಷಣವನ್ನು ಪಡೆಯುವುದು ಅವಶ್ಯಕವಾಗಿದೆ. ಈ ಬೆಳೆಯುತ್ತಿರುವ ಡಿಜಿಟಲ್ ಅಗತ್ಯತೆಯೊಂದಿಗೆ ಸಾಂಕ್ರಾಮಿಕವು ಸಂಪರ್ಕ, ಮೂಲಸೌಕರ್ಯ ಮತ್ತು ತಂತ್ರಜ್ಞಾನದೊಂದಿಗೆ ತೊಡಗಿಸಿಕೊಳ್ಳುವ ಸಾಮರ್ಥ್ಯದ ವಿಷಯದಲ್ಲಿ ಡಿಜಿಟಲ್ ವಿಭಜನೆಯನ್ನು ಅನಾವರಣಗೊಳಿಸಲಾಗಿದೆ. ಇದು ಸೀಮಿತ ಕಲಿಕಾ ಆಯ್ಕೆಗಳನ್ನು ಹೊಂದಿರುವ ವಿದ್ಯುತ್ ಪ್ರವೇಶದಂತಹ ಮೂಲಭೂತ ಸೇವೆಗಳಲ್ಲಿನ ಅಸಮಾನತೆಗಳನ್ನು ಹೊರಹಾಕಿದೆ.

ಇದರಿಂದ ಜಗತ್ತಿನಾದ್ಯಂತದ ಜನರು ತಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಹಕ್ಕುಗಳನ್ನು ತಿಳಿದುಕೊಳ್ಳಬಹುದು. ಸಾಕ್ಷರತೆಯನ್ನು ಸಾಮಾಜಿಕ ಮತ್ತು ವೈಯಕ್ತಿಕ ಅಭಿವೃದ್ಧಿಯ ಅವಶ್ಯಕತೆ ಎಂದು ಪರಿಗಣಿಸಲಾಗಿದೆ. ವಿಶ್ವಸಂಸ್ಥೆಯ ಪ್ರಕಾರ, ಜಾಗತಿಕವಾಗಿ, ಕನಿಷ್ಠ 773 ಮಿಲಿಯನ್ ವಯಸ್ಕರು ಮತ್ತು ಯುವಕರು ಇನ್ನೂ ಓದಲು ಮತ್ತು ಬರೆಯಲು ಸಾಧ್ಯವಿಲ್ಲ ಅದಲ್ಲದೇ 617 ಮಿಲಿಯನ್ ಮಕ್ಕಳು ಮತ್ತು ಹದಿಹರೆಯದವರು ಓದುವಿಕೆ ಮತ್ತು ಗಣಿತಶಾಸ್ತ್ರದಲ್ಲಿ ಕನಿಷ್ಠ ಪ್ರಾವೀಣ್ಯತೆಯನ್ನು ಹೊಂದಿಲ್ಲ ಎಂದು ತಿಳಿಸಿದೆ.

ಸಾಕ್ಷರತೆ ಎಂಬುದು ಪ್ರತಿಯೊಬ್ಬರಿಗೂ ಘನತೆ ಮತ್ತು ಹಕ್ಕಿನ ಪ್ರಶ್ನೆಯಾಗಿರುತ್ತದೆ. ಸಾಕ್ಷರತೆ ಹೊಂದಿದ ಮನುಷ್ಯ ಬದುಕುತ್ತಾನೆ ಮತ್ತು ಆತನಿಗೆ ತನ್ನ ಹಕ್ಕಿನ ಬಗೆಗೆ ಸಂಪೂರ್ಣವಾದ ಜ್ಞಾನ ಇರುತ್ತದೆ. ಸಾಕ್ಷರತೆಯ ಅಗತ್ಯತೆಯ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿಯೇ ಪ್ರತಿವರ್ಷ ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಸರ್ಕಾರಗಳಿಗೆ, ನಾಗರಿಕ ಸಮಾಜಗಳಿಗೆ ಮತ್ತು ಜನರಿಗೆ ವಿಶ್ವದ ಸಾಕ್ಷರತಾ ಮಟ್ಟವನ್ನು ಸುಧಾರಿಸಲು ಅವಕಾಶವನ್ನು ಮತ್ತು ಸಾಕ್ಷರತಾ ಸವಾಲುಗಳನ್ನು ಮೀರಿ ನಿಲ್ಲಲು ಈ ದಿನ ನೀಡುತ್ತದೆ ಎಂದು ಯುನೆಸ್ಕೋ ಹೇಳುತ್ತದೆ. ಬಡತನ ಪ್ರಮಾಣವನ್ನು ಕುಗ್ಗಿಸುವುದು, ಜನಸಂಖ್ಯೆಯನ್ನು ನಿಯಂತ್ರಿಸುವುದು, ಲಿಂಗ ಅಸಮಾನತೆಯನ್ನು ಹೋಗಲಾಡಿಸುವುದು ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾದರೆ ಪ್ರತಿಯೊಬ್ಬ ಮನುಷ್ಯನು ಸಾಕ್ಷರನಾಗಿರುವುದು ಅತಿ ಮುಖ್ಯವಾಗಿರುತ್ತದೆ.

ಸಾಕ್ಷರತೆಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಲಾಗಿದ್ದರೂ ಕೂಡ ಕೆಲವೊಂದು ಪ್ರದೇಶ ಮತ್ತು ಕೆಲವೊಂದು ಜನಾಂಗಗಳಲ್ಲಿ ಇನ್ನು ಕೂಡ ಸಾಕ್ಷರತೆಯು ನಿರೀಕ್ಷಿತ ಮಟ್ಟವನ್ನು ಮುಟ್ಟಿಲ್ಲ. ಹೀಗಾಗಿ ಶಿಕ್ಷಣದಲ್ಲಿ ಮತ್ತು ಸಾಕ್ಷರತ ಅಭಿವೃದ್ಧಿಯಲ್ಲಿ ಬಹುಭಾಷಿಕತೆ ಅಳವಡಿಸಿಕೊಳ್ಳುವುದರಿಂದ ಸಾಕ್ಷರತೆಯ ಸವಾಲುಗಳನ್ನು ಎದುರಿಸಲು ಸರಳವಾಗುತ್ತದೆ ಮತ್ತು ಇದರಿಂದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಬಹುದಾಗಿದೆ. ಎಂಬುದಾಗಿ ಯುನೆಸ್ಕೋ ಹೇಳಿದೆ. ನಮ್ಮ ವಿಶ್ವ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯವಾಗಿದೆ. 7,000 ಜೀವಂತ ಭಾಷೆಗಳನ್ನು ಹೊಂದಿದೆ. ಭಾಷೆ ಸಂವಹನಕ್ಕಿರುವ ಅಸ್ತ್ರ, ಜೀವಮಾನದ ಕಲಿಕೆಗೆ ಇರುವ ವಾಹಕ, ವಿಶ್ವಕ್ಕೆ ಕಾರ್ಯನಿರ್ವಹಣೆ ಮಾಡುವುದಕ್ಕಿರುವ ಸಾಧನವಾಗಿದೆ. ವಿಭಿನ್ನ ಭಾಷೆ, ಸಂಸ್ಕೃತಿ, ದೃಷ್ಟಿಕೋನ, ಜ್ಞಾನ ವ್ಯವಸ್ಥೆ ನಮ್ಮಲ್ಲಿದೆ” ಎಂದು ಯುನೆಸ್ಕೋ ಹೇಳಿದೆ.