ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ

ವಿಜಯಪುರ:ಮೇ.19: ನಗರದಲ್ಲಿ ಲೋಣಿ ಗ್ರೂಪ್ ಆಫ್ ಎಜುಕೇಶನ್ ವತಿಯಿಂದ, ಅಂತಾರಾಷ್ಟ್ರೀಯ ಶುಶ್ರೂಕರ ದಿನಾಚರಣೆ”ಯನ್ನು ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯ ಘನ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿಗಳಾದ ಡಾ. ವಿಜಯ ಮಹಾಂತೇಶ ದಾನಮ್ಮನವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಆರೋಗ್ಯ ಅಧಿಕಾರಿಗಳಾದ ಡಾ|| ಸಂಗಣ್ಣ ಲಕ್ಕಣ್ಣವರ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಮಾಜಿ ಕೆ.ಎನ್.ಸಿ.ರಜಿಸ್ಟ್ರ್‍ರ ಶ್ರೀಕಾಂತ ಪುಲಾರಿ, ವಿಶೇಷ ಅತಿಥಿಗಳಾಗಿ ಕರ್ನಾಟಕ ಎಜುಕೇಷನಲ್ ಟ್ರಸ್ಟನ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಲೋಣಿ ಮತ್ತು ಸಂಸ್ಥೆಯ ಅಧ್ಯಕ್ಷರಾದ ಸುರೇಶ ಲೋಣಿ , ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪ್ರತಿವರ್ಷ ಮೇ 12 ರಂದು ಅಂತಾರಾಷ್ಟ್ರೀಯ ನಸ್ರ್ಸ ದಿನಾಚರಣೆಯನ್ನು ಆಚರಿಸುತ್ತಾರೆ. ಫ್ಲಾರೆನ್ಸ್ ನೈಟಿಂಗೇಲ್ ಹುಟ್ಟಿದ ದಿನವಿದು. ನರ್ಸ್‍ಗಳು ಸಮಾಜಕ್ಕೆ ನೀಡುವ ಕೊಡುಗೆಗಳನ್ನು ಗುರುತಿಸಲು ವಿಶ್ವದಾದ್ಯಂತ ಈ ದಿನವನ್ನು ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ. ಜಿಲ್ಲಾಧಿಕಾರಿಗಳು ‘ಫ್ಲಾರೆನ್ಸ್ ನೈಟಿಂಗೇಲ್’ ಅವರ ಮೂರ್ತಿಯನ್ನು ಪೂಜಿಸುವ ಮೂಲಕ ಪ್ರಾಮುಖ್ಯತೆಯನ್ನು ಸಾರಲಾಯಿತು.
ಸಮಾರಂಭದ ಭಾಗವಾಗಿ ಶ್ರೀ ಸಿದ್ದೇಶ್ವರ ಮತ್ತು ಶ್ರೀ ಶಿವಯೋಗೇಶ್ವರ ನಸಿರ್ಂಗ್ ಕಾಲೇಜುಗಳ ವಿದ್ಯಾರ್ಥಿಗಳ “ಜ್ಯೋತಿ ಬೆಳಗುವ ಹಾಗೂ ಪ್ರತಿಜ್ಞಾ ಸ್ವೀಕಾರ” ಏರ್ಪಡಿಸಲಾಗಿತ್ತು.
ಪ್ರಾಂಶುಪಾಲರಾದ ವಹೀತಾಖನಮ್ ಪ್ರತಿಜ್ಞಾ ಸ್ವೀಕಾರವನ್ನು ವಿದ್ಯಾರ್ಥಿಗಳಿಗೆ ಭೋದಿಸಿದರು ಪೆÇ್ರಫೆಸರ್ ಗುರುಶಾಂತ ಪಾಸೋಡಿರವರು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.
ಎಸ್. ಎಸ್. ಎಲ್. ಸಿ ಮತ್ತು ಪಿ. ಯು. ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರಿಗೆ ಸನ್ಮಾನಿಸಲಾಯಿತು.
ಬಿ. ಎಸ್ಸಿ ನಸಿರ್ಂಗ್ ಹಾಗೂ ಪೆÇೀಸ್ಟ್ ಬಿ. ಎಸ್ಸಿ ನಸಿರ್ಂಗ್ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದವರಿಗೆ ಸನ್ಮಾನಿಸಲಾಯಿತು. ವಿಜಯಪುರದಲ್ಲಿ ಬೇರೆ ಬೇರೆ ನಸಿರ್ಂಗ್ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿ. ಎಚ್. ಡಿ ಪಡೆದ ಎಲ್ಲರನ್ನು ಗೌರವಾರ್ಪಣೆ ಮಾಡಲಾಯಿತು.
ಜಿಲ್ಲಾಧಿಕಾರಿಗಳು ನಸಿರ್ಂಗ್ ವೃತ್ತಿ ಜೀವನ ಕುರಿತು ತಮ್ಮ ಅಪಾರ ಜ್ಞಾನವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಮಲ್ಲಿಕಾರ್ಜುನ ಲೊಣಿ ರವರು ಫ್ಲಾರೆನ್ಸ್ ನೈಟಿಂಗೇಲ್’ ಕುರಿತು ಮಾತಾಡಿದರು.
ಶ್ರೀಕಾಂತ ಪುಲಾರಿ ರವರು ನಸಿರ್ಂಗ್ ಕ್ಷೇತ್ರದಲ್ಲಿ ಇರುವ ಕೋವಿಡ ನಂತರ ಸರಕಾರ ರೂಪಿಸಿರುವ ಉನ್ನತ ಉದ್ಯೋಗ ಅವಕಾಶಗಳ ಕುರಿತಾಗಿ ತಿಳಿಸಿಕೊಟ್ಟರು.