ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಹುಬ್ಬಳ್ಳಿ, ಜೂ22: ಮಿತ್ರ ಶಿಕ್ಷಣ ಸಂಸ್ಥೆಯ ಪವನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರಾಂಶುಪಾಲರಾದ ವಿಕ್ರಂ ಮಹಾಶಬ್ದೆ ಅವರು ಮಾತನಾಡಿ ಇಂದು ಯೋಗ ದಿನವನ್ನು ಇಡೀ ಜಗತ್ತೇ ಆಚರಿಸುತ್ತಿದೆ ಯೋಗವು ದೇಹವನ್ನು ಮನಸ್ಸನ್ನು ಸದೃಢವಾಗಿಡುವಲ್ಲಿ ಹಾಗೂ ರೋಗಗಳಿಂದ ಮುಕ್ತರಾಗಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳುತ್ತಾ ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನದ ಘೋಷಣಾ ವಾಕ್ಯವಾದ ವಸುದೈವ ಕುಟುಂಬಕಂ ಬಗ್ಗೆ ಹೇಳಿದರು.
ಸಭೆಯ ಮುಖ್ಯ ಅತಿಥಿಗಳಾದ ಶ್ರೀಮತಿ ರತ್ನ ಪಾಟಿಲ ಮಾತನಾಡಿ ಯೋಗದ ಮಹತ್ವ ವಿವರಿಸುತ್ತ ಪ್ರತಿದಿನ 10 ನಿಮಿಷವಾದರೂ ಯೋಗ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದರು. ದೈಹಿಕ ಶಿಕ್ಷಕರಾದ ನವೀನ್ ಜಗತಾಪ ಹಾಗೂ ಶ್ರೀಮತಿ ಭಾರತಿ ಜಮ್ಮಿ ಹಾಳ್ ಇವರ ಮಾರ್ಗದರ್ಶನದಲ್ಲಿ ಹಲವಾರು ಯೋಗಾಸನ ನೃತ್ಯಗಳನ್ನು ಪ್ರದರ್ಶಿಸಲಾಯಿತು. ಕುಮಾರಿ ಸೌಮ್ಯ ಹಾಗೂ ಶ್ರದ್ಧಾ ನಿರೂಪಿಸಿದರು.