ಅಂತಾರಾಷ್ಟ್ರೀಯ ಯೋಗ ದಿನಾಚರಣೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜೂ.22: ಪಟ್ಟಣದ ಇಂದು ಸಿಬಿಎಸ್‌ಇ ಶಾಲೆಯಲ್ಲಿ ೯ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ‘ವಸು ದೈವ ಕುಟುಂಬ’ ಎಂಬ ಧ್ಯೆಯವಾಕ್ಯದೊಂದಿಗೆ ಆಚರಿಸಲಾಯಿತು.
 ಈ ಕಾರ್ಯಕ್ರಮವನ್ನು ಶಾಲೆ ಪ್ರಾಂಶುಪಾಲರಾದ ಚೇತನ್ ಕುಮಾರ್ ಅವರು ಉದ್ಘಾಟಿಸಿ ನಮ್ಮೆಲ್ಲೆರ ಜೀವನದಲ್ಲಿ ಆರೋಗ್ಯವಾಗಿರಲು ಮತ್ತು ಸದಾ ಸಕ್ರಿಯವಾಗಿರಲು ಯೋಗಾಭ್ಯಾಸ ಬಹಳ ಸಹಾಯಕವಾಗುತ್ತದೆ, ಆಧುನಿಕ ಪ್ರಪಂಚದಲ್ಲಿ ಅತಿ ಹೆಚ್ಚು ಮನ್ನಣೆಗಳಿಸಿಕೊಳ್ಳುತ್ತಿರುವ ಯೋಗವನ್ನು ಆಧ್ಯಾತ್ಮಿಕ, ದೈಹಿಕ ಸಾಮರ್ಥ್ಯ, ಸಂಯಮ ಕಾಯ್ದುಕೊಳ್ಳಲು ಸಾಧನೆ ಮಾಡಲಾಗುವ ಉನ್ನತ ಜೀವನ ಶಿಕ್ಷಣ ಎಂದು ಗುರುತಿಸಲಾಗುತ್ತದೆ ಎಂದು ತಿಳಿಸಿದರು.
 ಈ ವೇಳೆ ಕನ್ನಡ ಮಾಧ್ಯಮ ಪ್ರೌಢ ಶಾಲೆ ಮುಖ್ಯೋಪಾಧ್ಯಾರಾದ ಮಹಾಂತೇಶ್ ಮಾತನಾಡಿ ಪ್ರಸ್ತುತ ವಿಶ್ವದಾದ್ಯಂತ ನಾನಾ ರೂಪಗಳಲ್ಲಿ ಹರಡಿಕೊಂಡಿರುವ ಯೋಗ ಮೂಲ ಇರುವುದು ಭಾರತದ ಮಣ್ಣಿನಲ್ಲಿ, ಮಹಾಯೋಗ ಗುರು ಎಂದು ಕರೆಯಲ್ಪಟುವ ಪಂತಜಲಿ ಮಹರ್ಷಿ ಇದರ ಪ್ರವರ್ತಕರು, ಋಷಿ ಮುನಿಗಳಿಂದ ಆರಂಭವಾಗಿ ಇಂದಿನವರೆಗೆ ನಾನಾ ಮಾರ್ಪಡುಗಳೊಂದಿಗೆ ಯೋಗ ಅನೇಕರ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಅಭಿಪ್ರಾಯ ಪಟ್ಟರು.
 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಪತಂಜಲಿ ಯೋಗ ಸಂಸ್ಥೆಯ ಯೋಗ ಶಿಕ್ಷಕರಾದ ಬಸವರಾಜ ಗೌಡ್ರು ಇವರು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು. ಕಾರ್ಯಕ್ರಮವನ್ನು ಶಾಲೆಯ ದೈಹಿಕ ಶಿಕ್ಷಕರಾದ ವೀರಭದ್ರಗೌಡ ವಂದಿಸಿದರು ಈ ವೇಳೆ ಸಿಬಿಎಸ್‌ಇ ಶಾಲೆ ಮತ್ತು ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಸಿಬ್ಬಂದಿಯವರು ಹಾಜರಿದ್ದರು.